ಬೆಂಗಳೂರು: ಕೊರೊನಾ ಸೋಂಕು ಹಾಗೂ ಬ್ಲ್ಯಾಕ್ ಫಂಗಸ್ ನಿಂದ ರಕ್ಷಿಸಿಕೊಳ್ಳಲು ಆಸ್ಪತ್ರೆಗಳಿಗೆ ಅಲೆದಾಡುವ, ಸಿಕ್ಕ ಸಿಕ್ಕ ಔಷಧಿಗಳನ್ನು ನುಂಗುವ ಅಗತ್ಯವೇ ಇಲ್ಲ. ಸುರಕ್ಷಿತವಾದ ಹಾಗೂ ಪರಿಣಾಮಕಾರಿಯಾದ ಔಷಧ ನಿಮ್ಮ ಮನೆಗಳಲ್ಲೇ ಇದೆ ಎಂದು ಡಾ. ರಾಜು ಮಹತ್ವದ ಸಲಹೆಯೊಂದನ್ನು ತಮ್ಮ ಹೊಸ ವಿಡಿಯೋದಲ್ಲಿ ನೀಡಿದ್ದಾರೆ.
ಇಬ್ಬರ ಬಾಳಿಗೆ ಬೆಳಕಾದ ಸಂಚಾರಿ ವಿಜಯ್ ಕಣ್ಣುಗಳು, ಜಗತ್ತು ನೋಡುವಂತಾದ ಯುವಕರು
ಹಲವು ಗಾಯ, ಸೋಂಕುಗಳಿಗೆ ರಾಮಬಾಣ ಎಂದೇ ಹೇಳುವ ಕೊಬ್ಬರಿ ಎಣ್ಣೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಪರಿಣಾಮಕಾರಿ. ಕೊಬ್ಬರಿ ಎಣ್ಣೆ ಕೊರೊನಾ ಸೋಂಕು ಮಾತ್ರವಲ್ಲ ಬ್ಲ್ಯಾಕ್ ಫಂಗಸ್ ಹಾಗೂ ಹೆಚ್ಐವಿ ವಿರುದ್ಧ ಹೋರಾಡಲು ದಿವ್ಯಾಷಧ ಎಂದರೂ ತಪ್ಪಲ್ಲ. ಕೊಬ್ಬರಿ ಎಣ್ಣೆಯಲ್ಲಿ ಲಾರಿಕ್ ಆಸಿಡ್ ಎಂಬ ಫ್ಯಾಟಿ ಆಸಿಡ್ ಇದ್ದು ಇದು ವೈರಸ್ ಗಳನ್ನು ಕೊಲ್ಲುವ ಶಕ್ತಿಯನ್ನು ಹೊಂದಿದೆ.
ಹಾಗಾದರೆ ಕೊಬ್ಬರಿ ಎಣ್ಣೆ ನಮ್ಮ ದೇಹದಲ್ಲಿ ವೈರಸ್ ಕೊಲ್ಲುವ ನಿಟ್ಟಿನಲ್ಲಿ ಯಾವ ರೀತಿ ಕೆಲಸ ಮಾಡುತ್ತೆ. ಕೊಬ್ಬರಿ ಎಣ್ಣೆಯನ್ನು ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ವೈಜ್ಞಾನಿಕವಾಗಿ ವಿವರಣೆ ನೀಡಿದ್ದಾರೆ ಡಾ.ರಾಜು. ಕೊರೊನಾ ಸೋಂಕಿನಿಂದ ಸುಲಭವಾಗಿ ರಕ್ಷಿಸಿಕೊಳ್ಳಲು ಡಾ. ರಾಜು ಅವರ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.