ಕೋರೋನಾ ಕಾಡುತ್ತಿರುವ ಈ ಸಂಕಷ್ಟಕರ ಸಮಯದಲ್ಲಿ ಮನೆಯೊಳಗೆ ಇದ್ದರಷ್ಟೇ ಸೇಫ್. ತರಕಾರಿ, ಹಣ್ಣು, ಹಾಲು ತರಲು ಮನೆಯಿಂದ ಹೊರ ಹೋಗುವುದು ಅನಿವಾರ್ಯವಾದಾಗ ಈ ಟಿಪ್ಸ್ ಗಳನ್ನು ಅನುಸರಿಸಲು ಮರೆಯದಿರಿ.
ಪೈಲ್ಸ್ ನಿವಾರಣೆಗೆ ಇಲ್ಲಿದೆ ಮನೆ ಮದ್ದು
ತರಕಾರಿ ಖರೀದಿಗೆ ಮನೆಯಿಂದ ಹೊರಹೋಗುವಾಗ ಸ್ಯಾನಿಟೈಸರ್ ಅನ್ನು ಜೊತೆಯಲ್ಲಿ ಇಟ್ಟುಕೊಳ್ಳಲು ಮರೆಯದಿರಿ. ಡಬಲ್ ಮಾಸ್ಕ್ ಧರಿಸಿ. ಹೆಚ್ಚು ಜನಜಂಗುಳಿ ಇರುವ ಪ್ರದೇಶವನ್ನು ಅವಾಯ್ಡ್ ಮಾಡಿ.
ಪದೇ ಪದೇ ಮುಖ ತೊಳೆದುಕೊಳ್ಳುವುದು ಒಳ್ಳೆಯದಾ…..?
ಮಾರಾಟಗಾರನಿಗೆ ನಿಮಗೂ ಕನಿಷ್ಠ 5 ಅಡಿ ಅಂತರ ಇರುವಂತೆ ನೋಡಿಕೊಳ್ಳಿ. ಆತ ಮಾಸ್ಕ್ ಹಾಕಿರದಿದ್ದರೆ, ಹಾಕಿಕೊಳ್ಳಲು ಹೇಳಿ. ಹೋಂ ಡೆಲಿವರಿ ಮನೆಬಾಗಿಲಿಗೆ ಜನ ಬಂದಿದ್ದರೆ ಬ್ಯಾಗನ್ನು ಅಲ್ಲೇ ಇಟ್ಟು ಹೋಗಲು ಹೇಳಿ. ಆತ ಬಾಗಿಲು, ಡೋರ್ ಬೆಲ್ ಮುಟ್ಟಿದರೆ ಅದನ್ನು ಸ್ಯಾನಿಟೈಸ್ ಮಾಡಿ. ಹೊರಗಿನಿಂದ ತಂದ ಚೀಲವನ್ನು ಕನಿಷ್ಠ ಎರಡರಿಂದ ಮೂರು ಗಂಟೆ ಹೊತ್ತು ಮುಟ್ಟದಿರಿ. ತರಕಾರಿಯನ್ನು ತೊಳೆದಿಡಿ. ತರಕಾರಿ ತೊಳೆಯಲು ಸೋಪು, ಲಿಕ್ವಿಡ್ ಗಳನ್ನು ಬಳಸುವ ಬದಲು ಅಡುಗೆ ಸೋಡಾ, ಉಪ್ಪು ಹಾಕಿ ತೊಳೆಯಿರಿ.