ಯಾವುದೇ ರೀತಿಯ ಧಾರ್ಮಿಕ ಭಾವನೆಗಳಿಗೂ ನೋವುಂಟು ಮಾಡುವ ಸಾಧ್ಯತೆಗಳಿಗೆ ಅವಕಾಶ ಕೊಡದೇ, ತನ್ನ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಹೆಚ್ಚಿನ ಒಳಗೊಳ್ಳುವಿಕೆಯ ಭಾವ ಮೂಡಿಸುವ ಉದ್ದೇಶದಿಂದ ಶೈಕ್ಷಣಿಕ ವರ್ಷವೊಂದರಲ್ಲಿ ಕೊಡುವ ರಜೆಗಳ ಹೆಸರುಗಳನ್ನೇ ಪಟ್ಟಿಯಿಂದ ಕೈಬಿಡಲು ಅಮೆರಿಕದ ನ್ಯೂಜೆರ್ಸಿಯ ಶಾಲಾ ಮಂಡಳಿಯೊಂದು ನಿರ್ಧರಿಸಿದೆ.
ಇಲ್ಲಿನ ಮಾರಿಸ್ ಕೌಂಟಿಯ ದಿ ರಾಂಡಾಲ್ಫ್ ಟೌನ್‌ಶಿಪ್‌ನಲ್ಲಿ, ಶಾಲಾ ಕ್ಯಾಲೆಂಡರ್‌ನಲ್ಲಿರುವ ಎಲ್ಲಾ ರಜೆಗಳ ಹೆಸರುಗಳನ್ನು ತೆಗೆದುಹಾಕಲು ನಿರ್ಧರಿಸಿದ್ದು, ಥ್ಯಾಂಕ್ಸ್ ಗಿವಿಂಗ್, ಮೆಮೋರಿಯಲ್ ಡೇ ಅಲ್ಲದೇ ಕ್ರಿಸ್ಮಸ್, ಯಾಮ್ ಕಿಪ್ಪರ್ ಹಾಗೂ ರಾಶ್ ಹಶ್ನಾನಾ ಸೇರಿ ಸಾಮುದಾಯಿಕ ಹಬ್ಬಗಳ ರಜೆಗಳ ಹೆಸರುಗಳನ್ನೂ ತೆಗೆದುಹಾಕಲು ಅವಿರೋಧವಾಗಿ ನಿರ್ಣಯಿಸಲಾಗಿದೆ.
ಬಾಲಕನ ಕೈಗೆ ಕಚ್ಚಿದ ಡಾಲ್ಫಿನ್..! ವೈರಲ್ ಆಯ್ತು ಶಾಕಿಂಗ್ ವಿಡಿಯೋ
ಶೈಕ್ಷಣಿಕ ವರ್ಷದ ಈ ಎಲ್ಲಾ ರಜೆಗಳನ್ನು ಸುಮ್ಮನೇ ’ರಜೆಗಳು’ ಎಂದು ಕರೆಯಲು ಮಾರಿಸ್ ಕೌಂಟಿಯ ಎಲ್ಲಾ ಶಾಲೆಗಳಲ್ಲೂ ಅನ್ವಯವಾಗುವಂತೆ ನಿರ್ಣಯವೊಂದನ್ನು ರಾಂಡಾಲ್ಫ್ ಶಿಕ್ಷಣ ಮಂಡಳಿಯ 100ಕ್ಕೂ ಹೆಚ್ಚು ಮಂದಿಯ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.