ಒಣಗಿದ ಎಲೆಯೋ…? ಬಣ್ಣದ ಚಿಟ್ಟೆಯೋ…? ನೋಡುಗರನ್ನ ಮೂಕವಿಸ್ಮಿತರನ್ನಾಗಿಸಿದೆ ಈ ವಿಡಿಯೋ 12-06-2021 1:29PM IST / No Comments / Posted In: Latest News, India, Live News ಪ್ರಕೃತಿಯ ಮಡಿಲಲ್ಲಿ ಅಗಾಧ ಜೀವಿಗಳಿವೆ. ಕೆಲವೊಂದು ಸೃಷ್ಟಿಗಳಂತೂ ನಮ್ಮ ಕಣ್ಣನ್ನೇ ನಾವು ನಂಬಲಾರದ ಮಟ್ಟಿಗೆ ಆಶ್ಚರ್ಯವನ್ನುಂಟು ಮಾಡುತ್ತವೆ. ಸಾಕಷ್ಟು ರಹಸ್ಯಗಳನ್ನ ತನ್ನ ಒಡಲಲ್ಲಿ ಇಟ್ಟುಕೊಂಡಿರೋ ಪ್ರಕೃತಿ ಸದಾ ನಮ್ಮ ಅಚ್ಚರಿಗೆ ಒಳಪಡಿಸುವ ಕಾರ್ಯ ಮಾಡುತ್ತದೆ. ಬಯೋಕಾನ್ ಲಿಮಿಟೆಡ್ನ ಕಾರ್ಯನಿರ್ವಾಹಕ ಅಧ್ಯಕ್ಷೆಯಾಗಿರುವ ಕಿರಣ್ ಮಂಜುಮ್ದಾರ್ ಶಾ ಈ ಮಾತಿಗೆ ಸಾಕ್ಷಿಯೆಂಬತಹ ವಿಡಿಯೋವನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಕೇವಲ 14 ಸೆಕೆಂಡ್ನ ಈ ವಿಡಿಯೋದಲ್ಲಿ ಒಣ ಎಲೆಯೊಂದನ್ನ ತೋರಿಸುತ್ತಾರೆ. ಈ ಒಣ ಎಲೆಯನ್ನ ಸೂರ್ಯನ ಬೆಳಕು ಇರುವ ಕಡೆ ತರುತ್ತಿದ್ದಂತೆಯೇ ಒಂದು ಆಶ್ಚರ್ಯ ಕಾದಿತ್ತು..! ನಾವೆಂದುಕೊಂಡಂತೆ ಅದು ಒಣ ಎಲೆ ಆಗಿರಲಿಲ್ಲ..! ಸೂರ್ಯನ ಬೆಳಕು ತಾಕುತ್ತಿದ್ದಂತೆಯೇ ಅದು ಚಿಟ್ಟೆ ಆಕೃತಿಯಲ್ಲಿ ಬದಲಾಗಿ ಹಾರಿದೆ. ಮತ್ತೆ ಸ್ವಲ್ಪ ದೂರ ಹೋಗಿ ಒಣ ಎಲೆಯ ಆಕೃತಿಯಲ್ಲೇ ಮಲಗಿದೆ. ಈ ವಿಡಿಯೋ 116.5 ಸಾವಿರಕ್ಕಿಂತಲೂ ಅಧಿಕ ವೀವ್ಸ್ ಸಂಪಾದಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ಪ್ರಕೃತಿಯ ಈ ವಿಸ್ಮಯ ಕಂಡು ಮೂಕವಿಸ್ಮಿತರಾಗಿದ್ದಾರೆ. Natural camouflage – a survival mechanism pic.twitter.com/IY2suGfkuN — Kiran Mazumdar-Shaw (@kiranshaw) June 8, 2021