alex Certify ವರ್ಷದೊಳಗೆ 1.5 ದಶಲಕ್ಷ ಪುಶ್‌-ಅಪ್ ಮಾಡಿ ವಿಶ್ವದಾಖಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷದೊಳಗೆ 1.5 ದಶಲಕ್ಷ ಪುಶ್‌-ಅಪ್ ಮಾಡಿ ವಿಶ್ವದಾಖಲೆ…!

ಅಮೆರಿಕದ ವಿಸ್ಕಾನ್ಸಿನ್‌ನ ವ್ಯಕ್ತಿಯೊಬ್ಬರು ಉತ್ತಮ ಕಾರ್ಯವೊಂದಕ್ಕೆ ನಿಧಿ ಸಂಗ್ರಹಣೆ ಮಾಡಲೆಂದು ಅಸಾಧಾರಣವಾದ ವ್ಯಾಯಾಮವೊಂದರಲ್ಲಿ ಮಾಡಲಾಗಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ.

ನೇಟ್‌ ಕರ‍್ರೋಲ್ ಹೆಸರಿನ ಈ ವ್ಯಕ್ತಿ ಒಂದು ವರ್ಷದಲ್ಲಿ ಅತಿ ಹೆಚ್ಚಿನ ಪುಶ್‌-ಅಪ್‌ಗಳನ್ನು ಮಾಡುವ ಮೂಲಕ ದಾಖಲೆ ನಿರ್ಮಿಸಲು ಹೊರಟಿದ್ದರು. ತಮ್ಮ ಈ ಪಯಣವನ್ನು ಜೂನ್ 13, 2020ರಂದು ಆರಂಭಿಸಿದ ನೇಟ್ ಇದುವರೆಗೂ 1.5 ದಶಲಕ್ಷ ಪುಶ್‌-ಅಪ್‌ಗಳನ್ನು ಮಾಡಿದ್ದಾರೆ.

ಆಗಸದಲ್ಲಿ ನಿಂತಲ್ಲೇ ನಿಂತಿದೆಯೇ ಈ ವಿಮಾನ….? ವೈರಲ್‌ ಆಗಿದೆ ವಿಡಿಯೋ

ಪ್ರತಿನಿತ್ಯ 4,000 ಪುಶ್‌-ಅಪ್ ಮಾಡುತ್ತಾ ಬಂದ ನೇಟ್, ಒಂದು ವರ್ಷದ ಅವಧಿ ಮುಗಿಯುವ ವೇಳೆಗೆ ಒಟ್ಟಾರೆ 15,00,231 ಪುಶ್‌-ಅಪ್‌ಗಳನ್ನು ಮಾಡಿದ್ದಾರೆ.

ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗದಣದ ವಾರ್ಷಿಕ ಫನ್ ಸಿಟಿ ಬೌಲ್‌ನಲ್ಲಿ ನೇಟ್ ಈ ದಾಖಲೆ ನಿರ್ಮಿಸಿದ್ದಾರೆ.

4 ಲಕ್ಷಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರಿಗೆ ಯೋಗಿ ಸರ್ಕಾರದಿಂದ ಸ್ಮಾರ್ಟ್​ಫೋನ್…!

9/11 ದುರಂತದಲ್ಲಿ ಪ್ರಾಣ ಕಳೆದುಕೊಂಡ ನ್ಯೂಯಾರ್ಕ್‌ನ ಪೊಲೀಸ್ ಹಾಗೂ ಇತರೆ ಇಲಾಖೆಗಳ ತುರ್ತು ಸೇವೆಗಳ ಸಿಬ್ಬಂದಿಯ ಸ್ಮರಣಾರ್ಥ ಏನಾದರೂ ಒಳ್ಳೆಯ ಕೈಂಕರ್ಯ ಮಾಡುವ ಉದ್ದೇಶದಿಂದ ತಾವು ಹೀಗೆ ಮಾಡಿದ್ದಾಗಿ ನೇಟ್ ಹೇಳಿಕೊಂಡಿದ್ದಾರೆ.

https://www.youtube.com/watch?v=b2xrg8914Xg

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...