ಗುಜರಾತ್ನ ಟೊಯೊಟೋ ವಾಹನ ವಿತರಕರು 200 ಇನ್ನೋವಾ ಕಾರುಗಳನ್ನ ಸಬ್ಸಿಡಿ ದರದಲ್ಲಿ ಆಂಬುಲೆನ್ಸ್ಗಳಾಗಿ ಪರಿವರ್ತಿಸಲು ಸಿದ್ಧರಾಗಿದ್ದಾರೆ. ಗ್ರಾಮೀಣ ಭಾಗಗಳ ಆಸ್ಪತ್ರೆಗಳಲ್ಲಿ ಈ ಇನ್ನೋವಾ ಆಂಬುಲೆನ್ಸ್ ಸೌಲಭ್ಯವನ್ನ ನೀಡುವ ಉದ್ದೇಶವನ್ನ ಹೊಂದಲಾಗಿದೆ.
ಇನ್ನೋವಾ ಎಂಪಿವಿ ಕಾರಿನಲ್ಲಿ ವೈದ್ಯಕೀಯ ಆಮ್ಲಜನಕ, ಸ್ಟ್ರೆಚರ್ ಸೇರಿದಂತೆ ಆಂಬುಲೆನ್ಸ್ಗಳಲ್ಲಿ ಇರುವ ಎಲ್ಲಾ ವೈದ್ಯಕೀಯ ಸಾಧನಗಳನ್ನು ಅಳವಡಿಸಲಾಗುತ್ತದೆ. ಈ ರೀತಿಯ ಮಾರ್ಪಾಡನ್ನ ಮಾಡಲು ಪ್ರತಿ ಕಾರಿಗೆ 3 ರಿಂದ 4.5 ಲಕ್ಷ ರೂಪಾಯಿ ಖರ್ಚು ಉಂಟಾಗಬಹುದು.
ಸಬ್ಸಿಡಿ ದರದ ಬಳಿಕ ಇದರ ಮೊತ್ತ 20.6 ಲಕ್ಷ ರೂಪಾಯಿಗಳಿಗೆ ಇಳಿಕೆ ಆಗಬಹುದು. ರಿಯಾಯಿತಿ ನೀಡಿದ ಹಣವನ್ನ ಶಾಸಕರು ಅಥವಾ ಸಂಸದರು ಸ್ವಯಂ ಪ್ರೇರಣೆಯಿಂದ ನೀಡಬಹುದು ಎಂದು ವಿತರಕರು ಹೇಳಿದಾರೆ.
ಗ್ರಾಮೀಣ ಭಾಗಗಳಲ್ಲಿ ಕೋವಿಡ್ ರೋಗಿಗಳಿಗೆ ಆಂಬುಲೆನ್ಸ್ಗಳ ಅಭಾವವಿದೆ. ಆರೋಗ್ಯ ತಜ್ಞರು ಹಾಗೂ ಜಿಲ್ಲಾಸ್ಪತ್ರೆಗಳ ವೈದ್ಯರ ಜೊತೆ ಚರ್ಚೆ ನಡೆಸಿದ ಬಳಿಕ ನಮಗೆ ಈ ವಿಚಾರ ತಿಳಿದು ಬಂದಿದೆ. ಹೀಗಾಗಿ ಪ್ರಸ್ತುತ ಈ ಸಂದರ್ಭದಲ್ಲಿ ಇನ್ನೋವಾ ಕಾರುಗಳನ್ನ ಆಂಬುಲೆನ್ಸ್ಗಳಾಗಿ ಮಾರ್ಪಡಿಸುವ ಮೂಲಕ ಸೋಂಕಿನ ವಿರುದ್ಧದ ದೇಶದ ಹೋರಾಟಕ್ಕೆ ನಾವೂ ಕೈಜೋಡಿಸಲು ಇಚ್ಚಿಸಿದ್ದೇವೆ ಎಂದು ಚೇರ್ಮೆನ್ ಅಜಿತ್ ಮೆಹ್ತಾ ಹೇಳಿದ್ರು.