ಕೇಂದ್ರ ಸರ್ಕಾರದಿಂದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇದೇ ಮಂಗಳವಾರದಿಂದ ಕೋವಿಡ್-19 ಲಸಿಕೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಆದರೆ ಈ ವಿತರಣೆ ಹಿಂದೆ ಜನಸಂಖ್ಯೆ, ಸೋಂಕಿನ ಹೊಡೆತ ಹಾಗೂ ಲಸಿಕಾ ಕಾರ್ಯಕ್ರಮಗಳ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ.
ಈ ಸಂಬಂಧ ಪರಿಷ್ಕೃತ ಮಾರ್ಗಸೂಚಿಗಳು ಇದೇ ಜೂನ್ 21ರಿಂದ ಚಾಲ್ತಿಗೆ ಬರಲಿವೆ. ಮೇಲ್ಕಂಡ ಅಂಶಗಳನ್ನು ಕಾಲಕಾಲಿಕವಾಗಿ ಪರಿಶೀಲಿಸಿಕೊಂಡು ಹೋಗುತ್ತಲೇ ರಾಷ್ಟ್ರೀಯ ಕೋವಿಡ್ ಲಸಿಕಾ ಕಾರ್ಯಕ್ರಮ ಮುಂದುವರೆಸಲಾಗುವುದು.
ಮುಂಚೂಣಿ ಆರೋಗ್ಯ ಸೇವಾ ಕಾರ್ಯಕರ್ತರು, 45 ವರ್ಷ ಮೇಲ್ಪಟ್ಟ ನಾಗರಿಕರು ಹಾಗೂ 18 ವರ್ಷ ಮೇಲ್ಪಟ್ಟ ಹಾಗೂ ಎರಡನೇ ಡೋಸ್ ಚುಚ್ಚುಮದ್ದು ಪಡೆಯಬೇಕಿರುವ ಮಂದಿಗೆ ಲಸಿಕೆ ಹಾಕಿಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕಾಂಡೋಮ್ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ: ಒಲಿಂಪಿಕ್ಸ್ ನಲ್ಲಿ ಲೈಂಗಿಕ ಕ್ರಿಯೆ ನಡೆಯುತ್ತಾ..? ಬೇಕಾದಷ್ಟು ಕಾಂಡೋಮ್ ಕೊಡೋದೇಕೆ..?
18 ವರ್ಷ ಮೇಲ್ಪಟ್ಟ ನಾಗರಿಕರ ಸಮೂಹದ ವಿಚಾರದಲ್ಲಿ, ಲಸಿಕೆಗಳ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ತಮ್ಮದೇ ವಿವೇಚನೆಯಲ್ಲಿ ನಿರ್ಣಯ ತೆಗೆದುಕೊಳ್ಳಬಹುದಾಗಿದೆ.
ದೇಶದಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಉಚಿತ ಕೋವಿಡ್ ಲಸಿಕೆಗಳನ್ನು ಜೂನ್ 21ರ ನಂತರ ಕೊಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ ಬಳಿಕ ಈ ಹೊಸ ಮಾರ್ಗಸೂಚಿಗಳು ಚಾಲ್ತಿಗೆ ಬಂದಿವೆ.
ಲ್ಯಾಪ್ಟಾಪ್ ಅಂತ್ಯಕ್ರಿಯೆಗೆ ಮುಂದಾದ ಟಿಕ್ಟಾಕರ್…!
ದೇಶದಲ್ಲಿ ಉತ್ಪಾದನೆಯಾಗುವ ಲಸಿಕೆಗಳಲ್ಲಿ 75%ರಷ್ಟನ್ನು ಭಾರತ ಸರ್ಕಾರ ಖರೀದಿಸಲಿದೆ ಎಂದು ಈ ಹೊಸ ಮಾರ್ಗಸೂಚಿಗಳಲ್ಲಿನ ಪ್ರಮುಖ ಅಂಶವೊಂದು ತಿಳಿಸುತ್ತದೆ.
ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪ್ರಜೆಗಳಿಗೆ ನಿಶ್ಶುಲ್ಕವಾಗಿ ಕೋವಿಡ್ ಲಸಿಕೆಗಳನ್ನು ಆದ್ಯತೆಯನುಸಾರ ಹಾಕಬೇಕಾಗಿದೆ.