alex Certify ಈ ಬೆಕ್ಕಿನ ಚಾಣಾಕ್ಷತನ ನೋಡಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬೆಕ್ಕಿನ ಚಾಣಾಕ್ಷತನ ನೋಡಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ..!

ಬೆಕ್ಕುಗಳನ್ನ ಬುದ್ಧಿವಂತ ಪ್ರಾಣಿಗಳು ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ. ತಮಗೆ ಬೇಕಾಗಿದ್ದನ್ನ ಹೇಗೆ ಪಡೆದುಕೊಳ್ಳಬೇಕು ಅನ್ನೋದು ಬೆಕ್ಕುಗಳಿಗೆ ಚೆನ್ನಾಗಿಯೇ ತಿಳಿದಿರುತ್ತೆ. ಇದೇ ಮಾತಿಗೆ ಉದಾಹರಣೆ ಎಂಬಂತೆ ದಕ್ಷಿಣ ಕೊರಿಯಾದಲ್ಲಿ ಬೆಕ್ಕೊಂದು ಅಪರಿಚಿತನ ಮನೆಯಲ್ಲಿ ಡೋರ್​ ಪಾಸ್​ವರ್ಡ್​ ಟೈಪ್​ ಮಾಡುವ ಮೂಲಕ ಮನೆಗೆ ಎಂಟ್ರಿ ಕೊಟ್ಟಿದೆ.

ಈ ಡೋರ್​ ಕೋಡ್​ಗಳನ್ನ ಬಳಕೆ ಮಾಡಿ ಬೆಕ್ಕು ದಿನಕ್ಕೆ 20 ಬಾರಿ ಮನೆಗೆ ಎಂಟ್ರಿ ಕೊಟ್ಟಿದೆ ಎಂದು ಮನೆ ಮಾಲೀಕರು ಹೇಳಿದ್ದಾರೆ. ಅಲ್ಲದೇ ಇದು ಮನೆಯಲ್ಲಿ ಸಾಕಲಾಗಿದ್ದ ಶ್ವಾನವನ್ನೂ ಪೀಡಿಸುತ್ತಿತ್ತಂತೆ. ಮನೆ ಮಾಲೀಕೆ ಈ ಬೆಕ್ಕನ್ನು ಮನೆಯಿಂದ ಎಷ್ಟು ಬಾರಿ ಓಡಿಸಿದ್ರೂ ಮತ್ತೆ ಮತ್ತೆ ವಾಪಸ್ಸಾಗುತ್ತಿತ್ತಂತೆ.

ತನ್ನ ಕಾಲಿನಲ್ಲಿರೋ ಉಗುರುಗಳಿಂದ ಈ ಬೆಕ್ಕು ಮನೆ ಲಾಕ್​ ಮಾಡುವ ಸಾಧನದ ಮೇಲಿದ್ದ ಶೀಟನ್ನು ಹಾಳು ಮಾಡಿದೆ. ಈ ಬಿಲ್ಡಿಂಗ್​​ನಿಂದ ಹೊರಗೆ ಹೋಗೋದು ಹೇಗೆ ಅಂತಲೂ ಈ ಬೆಕ್ಕು ತಿಳಿದುಕೊಂಡಿದೆಯಂತೆ..!

ಮನೆ ಮಾಲೀಕನ ಪತ್ನಿಗೂ ಈ ಬೆಕ್ಕು ಇಷ್ಟ ಎನಿಸಿದ್ರೂ ಸಹ ಅದು ಶ್ವಾನಕ್ಕೆ ಕಾಟ ಕೊಡುತ್ತೆ ಎಂಬ ಕಾರಣಕ್ಕೆ ದೂರ ಇಟ್ಟಿದ್ದರು ಎನ್ನಲಾಗಿದೆ. ಕೊನೆಗೂ ದಂಪತಿ ಈ ಬೆಕ್ಕನ್ನ ಸಾಕಲು ನಿರ್ಧರಿಸಿದ್ದು ಅದಕ್ಕೊಂದು ಹೆಸರನ್ನೂ ಇಟ್ಟಿದ್ದಾರೆ. ಶ್ವಾನಕ್ಕೆ ಯಾವುದೇ ಹಿಂಸೆಯಾಗದಂತೆ ನೋಡಿಕೊಂಡು ಬೆಕ್ಕನ್ನ ಸಾಕಲಾಗುತ್ತಿದೆ. ಈ ಬೆಕ್ಕಿನ ಚಾಣಾಕ್ಷತನವನ್ನ ನೋಡಿದ ನೆಟ್ಟಿಗರೂ ಸಹ ಶಾಕ್​ ಆಗಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...