ಹೈ ಹೀಲ್ಡ್ ಚಪ್ಪಲಿಯನ್ನ ಧರಿಸೋಕೆ ಅನೇಕರು ಕಷ್ಟ ಪಡ್ತಾರೆ. ಅಂತದ್ರಲ್ಲಿ ಮಿಜೋರಾಂನ ಬಾಲಕಿಯೊಬ್ಬಳು ಹೈ ಹೀಲ್ಡ್ ಧರಿಸಿ ಫುಟ್ಬಾಲ್ ಆಟವಾಡುವ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುವ ಕೀಪಿ ಊಪಿ ಚಾಲೆಂಜ್ನ ಭಾಗವಾಗಿ ಬಾಲಕಿ ಈ ಸಾಧನೆ ಮಾಡಿದ್ದಾಳೆ. 14 ವರ್ಷದ ಬಾಲಕಿ ಈ ವಿಡಿಯೋವನ್ನ ಇನ್ಸ್ಟಾದಲ್ಲಿ ಶೇರ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಐಜಾವ್ಲ್ನ ಕಿಂಡಿ ಎಂಬಾಕೆ ಈ ಕ್ವಾರಂಟೈನ್ ಚಾಲೆಂಜ್ನ್ನು ಕಪ್ಪು ಬಣ್ಣದ ಕಿಟನ್ ಹೀಲ್ಸ್ ಧರಿಸಿ ಪೂರೈಸಿದ್ದಾಳೆ. ಇಷ್ಟುದ್ದದ ಹೀಲ್ಡ್ ಚಪ್ಪಲಿಯಲ್ಲಿ ಬ್ಯಾಲೆನ್ಸ್ ಕಾಪಾಡಿದ ಬಾಲಕಿಯ ಸಾಧನೆ ನೆಟ್ಟಿಗರ ಹುಬ್ಬೇರಿಸಿದೆ. ಈಕೆ ಒಂದು ಬಾರಿಯೂ ಫುಟ್ಬಾಲ್ ನೆಲಕ್ಕೆ ತಾಗದಂತೆ ಚಾಲೆಂಜ್ ಪೂರ್ಣಗೊಳಿಸಿದ್ದಾಳೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕಿಂಡಿ, ತಾನು ಸಾಕಷ್ಟು ರಾಜ್ಯ ಹಾಗೂ ದೇಶ ಮಟ್ಟದ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಿದ್ದಾಗಿ ಹೇಳಿಕೊಂಡಿದ್ದಾಳೆ. 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆಗೆ ಫುಟ್ಬಾಲ್ ಫ್ಯಾಶನ್ ಅಂತೆ. ಕಿಂಡಿ ತಂದೆಯೇ ಫುಟ್ಬಾಲ್ ಕೋಚ್ ಆಗಿದ್ದು ಈಕೆಗೆ ಬಾಲ್ಯದಿಂದಲೇ ಫುಟ್ಬಾಲ್ ಆಟದ ತರಬೇತಿ ನೀಡಿದ್ದಾರೆ.
https://www.instagram.com/p/CPqdx97Akv4/?utm_source=ig_web_copy_link