ನಿಶ್ಚಿತ ವರನಿಗೆ ತಮಾಷೆ ಮಾಡಲು ಹೋಗಿ ಯುವತಿಯೇ ನಗೆಪಾಟಲಿಗೀಡಾಗಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಶ್ಚಿತ ವಧು ಮೋನಿಕಾ ಎಂಬಾಕೆ ತನ್ನ ಸಂಗಾತಿ ಸ್ಯಾಮ್ ಮೇಲೆ ತಮಾಷೆ ಮಾಡಲು ಇಚ್ಛಿಸಿದಳು.
ತಾನು ಆತನಿಗೆ ಮೋಸ ಮಾಡುತ್ತಿದ್ದೇನೆ ಎಂದು ನಂಬಿಸಿದ್ರೆ ಆತನ ರಿಯಾಕ್ಷನ್ ಏನಿರುತ್ತೆ ಎಂದು ತಿಳಿಯೋದು ಮೋನಿಕಾಳ ಉದ್ದೇಶವಾಗಿತ್ತು.
ಮೋನಿಕಾ ಮನೆಯಿಂದ ಸ್ಯಾಮ್ ತನ್ನ ಕಾರಿನತ್ತ ವಾಪಸ್ ಆಗುತ್ತಿದ್ದಂತೆಯೇ ಮೋನಿಕಾ, ಆತನಿಗೆ ಅನುಮಾನ ಬರುವ ರೀತಿಯಲ್ಲಿ ಮೆಸೇಜ್ ಕಳುಹಿಸಿದ್ದಳು. ಅವನು ಹೊರಡುತ್ತಿದ್ದಾನೆ. ನೀನಿನ್ನು ಬರಬಹುದು ಎಂದು ಮೆಸೇಜ್ನಲ್ಲಿ ಬರೆಯಲಾಗಿತ್ತು. ಈ ಮೆಸೇಜ್ ನೋಡಿದ ಸ್ಯಾಮ್ ನನ್ನ ಮೇಲೆ ಕ್ರೋಧಿತನಾಗಿರಬಹುದು ಎಂದು ಮೋನಿಕಾ ಭಾವಿಸಿದ್ದಳು.
ಮೆಸೇಜ್ ನೋಡಿದ ಸ್ಯಾಮ್ ಮೋನಿಕಾಳ ಮನೆಗೆ ವಾಪಸ್ಸಾಗಿದ್ದಾನೆ. ಮತ್ತೆ ತನ್ನ ನಾಟಕವನ್ನ ಮುಂದುವರಿಸಿದ ಮೋನಿಕಾ, ಅಯ್ಯೋ ನೀನು ಮನೆಯಿಂದ ತೆರಳಿದೆ ಎಂದುಕೊಂಡಿದ್ದೆ ಎಂದು ಹೇಳಿದ್ದಾಳೆ. ಅದಕ್ಕೆ ಸ್ಯಾಮ್ ನಾನು ಮನೆಯಿಂದ ಹೊರಟಿದ್ದೆ. ಆದರೆ ನಿನ್ನ ಮೆಸೇಜ್ ನೋಡಿ ವಾಪಸ್ಸಾದೆ ಎಂದು ಪ್ರತ್ಯುತ್ತರ ನೀಡಿದ್ದಾನೆ.
ಈಗ ಸ್ಯಾಮ್ ಜಗಳ ಮಾಡುತ್ತಾನೆ ಎಂದು ಮೋನಿಕಾ ಭಾವಿಸಿದ್ದಳು ಆದರೆ ಆತ ಮಾತ್ರ ನೀನು ನನ್ನ ಬರ್ತಡೇ ಪಾರ್ಟಿ ನೀಡಲು ಪ್ಲಾನ್ ಮಾಡುತ್ತಿದ್ದೀಯಾ ಎಂದು ಕೇಳಿದ್ದಾನೆ. ಅದಕ್ಕೆ ಮೋನಿಕಾ ನಿನ್ನ ಬರ್ತಡೇ ಮುಗಿದು ಹೋಗಿದೆ ಎಂದು ಹೇಳಿದ್ದಾಳೆ. ಬರ್ತಡೇ ಮುಗಿದ್ರೆ ಏನಂತೆ ಸೆಲೆಬ್ರೇಟ್ ಮಾಡಬಾರದು ಎಂದೇನಿದೆ..? ನಂಗೊತ್ತು ನೀನು ಮಾಡುತ್ತೀಯಾ..? ಐ ಲವ್ ಯೂ ಎಂದು ಹೇಳಿ ಮನೆಯಿಂದ ಮತ್ತೆ ತೆರಳಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನ್ನ ಪತ್ನಿಯಾಗುವವಳ ಮೇಲೆ ಸ್ಯಾಮ್ಗಿರುವ ನಂಬಿಕೆ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.