ಇಂದು ಸ್ವರ ಮಾಂತ್ರಿಕ ದಿವಂಗತ ಎಸ್.ಪಿ. ಬಾಲಸುಬ್ರಮಣ್ಯಂರ ಜನ್ಮದಿನ. ಈಗಾಗಲೇ ಸಾಕಷ್ಟು ಸಂಗೀತಕಾರರು ಹಾಗೂ ಸಂಗೀತ ಪ್ರಿಯರು ಎಸ್ಪಿಬಿಯವರನ್ನ ಸ್ಮರಿಸುತ್ತಿದ್ದಾರೆ. ಎದೆ ತುಂಬಿ ಹಾಡಲು ಮತ್ತೊಮ್ಮೆ ಕರುನಾಡಲೇ ಹುಟ್ಟಿಬನ್ನಿ ಎಂದು ಅನೇಕರು ಪ್ರಾರ್ಥನೆಯನ್ನೂ ಮಾಡ್ತಿದ್ದಾರೆ.
ಈ ನಡುವೆ ಸಂಗೀತ ನಿರ್ದೇಶಕ ವಿಘ್ನೇಶ್ವರ ಕಲ್ಯಾಣರಮಣ, ಎಸ್ಪಿಬಿ 75ನೇ ವರ್ಷದ ಜನ್ಮದಿನದ ಪ್ರಯುಕ್ತ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಗಾನ ಗಂಧರ್ವನ ಜನ್ಮದಿನದ ಪ್ರಯುಕ್ತ ಎಸ್ಪಿಬಿ ಹಾಡಿರುವ ವಿಘ್ನೇಶ್ವರ ಕಲ್ಯಾಣರಮಣ ಸಂಗೀತ ನಿರ್ದೇಶನದ ಕಾಥಡಿ ಮೇಘಂ ಹಾಡನ್ನ ರಿಲೀಸ್ ಮಾಡಿದ್ದಾರೆ.
ಸ್ಟಾರ್ ಮ್ಯೂಸಿಕ್ ಇಂಡಿಯಾ ಯುಟ್ಯೂಬ್ ಚಾನೆಲ್ನಲ್ಲಿ ಈ ಹಾಡನ್ನ ರಿಲೀಸ್ ಮಾಡಲಾಗಿದೆ. ಕಾಥಡಿ ಮಗಮ್ಗೆ ಕುಟ್ಟಿ ರೇವತಿಯವರ ಸಾಹಿತ್ಯವಿದೆ.
ವಿಘ್ನೇಶ್ವರ ಕಲ್ಯಾಣರಮಣರ ಈ ವಿಶೇಷ ಕೊಡುಗೆಗೆ ಹರಿಹರನ್, ಶಂಕರ್ ಮಹದೇವನ್, ಲಿಯೋನ್ ಜೇಮ್ಸ್ ಸೇರಿದಂತೆ ಸಂಗೀತ ಲೋಕದ ದಿಗ್ಗಜರು ಧನ್ಯವಾದ ಅರ್ಪಿಸಿದ್ದಾರೆ.
ಬ್ರಿಟನ್ನಲ್ಲಿ ಮ್ಯೂಸಿಕ್ ಪ್ರೊಡಕ್ಷನ್ ಕೋರ್ಸ್ ಮುಗಿಸಿದ ಬಳಿಕ ನಾನು ಚೆನ್ನೈನ ಸ್ಟುಡಿಯೋದಲ್ಲಿ ಸಹಾಯಕ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಲು ಆರಂಭಿಸಿದೆ. ಬಳಿಕ ನನಗೆ ಎಸ್.ಪಿ. ಬಾಲಸುಬ್ರಮಣ್ಯಂರ ಪರಿಚಯವಾಯ್ತು. ಬಳಿಕ ಅವರ ಜೊತೆ ನನ್ನ ಬೆಸುಗೆ ಬಲವಾಯ್ತು ಅಂತಾ ಹಳೆಯ ನೆನಪುಗಳನ್ನ ವಿಘ್ನೇಶ್ವರ್ ಮೆಲಕು ಹಾಕಿದ್ದಾರೆ.