ಮೆಲ್ಬರ್ನ್ನ ಕೊರೆಯುವ ಚಳಿಯಲ್ಲಿ ನಡುಗುತ್ತಿದ್ದ ನಿರ್ಗತಿಕನೊಬ್ಬನಿಗೆ ಊಟ ಹಾಗೂ ಇತರೆ ಅಗತ್ಯ ವಸ್ತು ತೆಗೆದುಕೊಟ್ಟ ಇಬ್ಬರು ಪೊಲೀಸ್ ಅಧಿಕಾರಿಗಳು ನೆಟ್ಟಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಕೋವಿಡ್-19 ಲಾಕ್ಡೌನ್ ಕಾರಣದಿಂದ ಎಲ್ಲೆಡೆ ವ್ಯಾಪಾರ ನಿರ್ಬಂಧಗೊಂಡ ಕಾರಣ ನಿರ್ಗತಿಕ ಮಂದಿಗೆ ಆಹಾರ ಸಿಗುವುದು ಕಷ್ಟವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಇಂತವರು ಹೊಟ್ಟೆ ಹಸಿವಿನಿಂದ ಇರದಂತೆ ನೋಡಿಕೊಳ್ಳುತ್ತಿದ್ದಾರೆ ಮೆಲ್ಬರ್ನ್ ಪೊಲೀಸರು.
ಅದೀಲೇ ಬರ್ಬರೋ ಎಂಬ ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಕಥೆಯನ್ನು ಹಂಚಿಕೊಂಡಿದ್ದು, ಅಧಿಕಾರಿಗಳು ಚಿಕನ್ ಹಾಗೂ ಬ್ರೆಡ್ ರೋಲ್ಗಳನ್ನು ಖರೀದಿಸಿ, ವೆಚ್ಚವನ್ನು ಇಬ್ಬರೂ ಅರ್ಧ-ಅರ್ಧ ಹಂಚಿಕೊಂಡು ಆ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು ಪೊಲೀಸರ ಈ ಔದಾರ್ಯವನ್ನು ಶ್ಲಾಘಿಸಿದ್ದಾರೆ.