ಆಕಾಶದಲ್ಲಿ ಗೊಂಬೆಗಳು ಹಾರಾಡುವಂತ ಸಾಕಷ್ಟು ವಿಡಿಯೋಗಳನ್ನ ನೀವು ನೋಡಿರ್ತಿರಾ. ಆದರೆ ಎಂದಾದರೂ ಮಾನವ ಕೂಡ ನಿಜ ಜೀವನದಲ್ಲಿ ಈ ರೀತಿ ಹಾರಾಡೋಕೆ ಸಾಧ್ಯವಾ ಎಂದು ಯೋಚನೆ ಮಾಡಿದ್ದೀರಾ..?ಆದರೆ ಈ ಮಾತು ಕೂಡ ನಿಜವಾಗಿದೆ. ಮನುಷ್ಯರು ಸಹ ಆಕಾಶದಲ್ಲಿ ಹಾರಾಡೋಕೆ ವಿಶೇಷ ಸಾಧನವೊಂದನ್ನ ಕಂಡುಹಿಡಿಯಲಾಗಿದೆ.
ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಬ್ಯಾಕ್ ಪ್ಯಾಕ್ ಹೆಲಿಕಾಪ್ಟರ್ನ್ನು ಕಂಡು ಹಿಡಿಯಲಾಗಿದ್ದು ಆಸ್ಟ್ರೇಲಿಯಾದ ಸಮುದ್ರವೊಂದರ ಬಳಿ ಪ್ರಯೋಗ ಪರೀಕ್ಷೆ ನಡೆಸಿದೆ.
ಈ ವಿಡಿಯೋದ ತುಣುಕಿನಲ್ಲಿ ಪೈಲಟ್ ಸುರಕ್ಷಾ ಧಿರಿಸು ಹಾಗೂ ಹೆಲ್ಮೆಟ್ ಧರಿಸಿ ಬೆನ್ನಿಗೆ ಬ್ಯಾಕ್ ಪ್ಯಾಕ್ ಹೆಲಿಕಾಪ್ಟರ್ ಹಾಕಿಕೊಂಡು ಹಾರಾಡುತ್ತಿರೋದನ್ನ ನೀವು ಕಾಣಬಹುದಾಗಿದೆ. ಈ ಬ್ಯಾಕ್ ಪ್ಯಾಕ್ ಹೆಲಿಕಾಪ್ಟರ್ಗೆ ಕಾಪ್ಟರ್ಪ್ಯಾಕ್ ಎಂದು ಹೆಸರಿಡಲಾಗಿದೆ.
ಬ್ಯಾಕ್ ಪ್ಯಾಕ್ ಹೆಲಿಕಾಪ್ಟರ್ಗಳನ್ನ ಮನುಷ್ಯನ ಬೆನ್ನಿಗೆ ಅಳವಡಿಸಲಾಗುತ್ತೆ. ಇವುಗಳ ಮೋಟಾರ್ನ ಸಹಾಯದಿಂದ ಚಲಿಸುತ್ತವೆ. ಈ ಹೆಲಿಕಾಪ್ಟರ್ಗೆ ಎರಡು ಟರ್ಬೈನ್ಗಳನ್ನ ಇರಿಸಲಾಗಿದೆ.ಇದರ ಸಹಾಯದಿಂದ ಪೈಲಟ್ ಆಗಸದಲ್ಲಿ ಹಾರಾಡಬಲ್ಲ. ಈ ಹೆಲಿಕಾಪ್ಟರ್ನ್ನು ಕಾರ್ಬನ್ ಫೈಬರ್ ಹನಿಕೋಂಬ್ನಿಂದ ಸಿದ್ಧಪಡಿಸಲಾಗಿದೆ. ಇದು ಒಂದು ರೀತಿಯಲ್ಲಿ ಪ್ಯಾರಾಚೂಟ್ನಂತೆಯೇ ಕಾರ್ಯನಿರ್ವಹಿಸುತ್ತೆ.