ಕೀನ್ಯಾದ ವನ್ಯಧಾಮವೊಂದರಲ್ಲಿ ಸಫಾರಿ ಮೋಜಿನಲ್ಲಿದ್ದ ಜನರ ಗುಂಪೊಂದಕ್ಕೆ ಜನ್ಮದುದ್ದಕ್ಕೂ ನೆನೆಸಿಕೊಳ್ಳುವ ಭೀತಿಯೊಂದು ಎದುರಾಗಿತ್ತು.
ವಿಕ್ಟೋರಿಯಾ ಸರೋವರದಲ್ಲಿ ಸ್ಪೀಡ್ಬೋಟ್ ಜಾಲಿಯಲ್ಲಿದ್ದ ಈ ಗುಂಪು ತಮ್ಮತ್ತಲೇ ಬರುತ್ತಿರುವುನ್ನು ಕಂಡು ಅವರನ್ನು ಬೆನ್ನತ್ತಿದ ದೈತ್ಯ ನೀರಾನೆಯೊಂದು ದಿಢೀರ್ ಎಂದು ನೀರಿನಾಳಕ್ಕೆ ಇಳಿದುಬಿಟ್ಟಿದೆ.
ಘಟನೆಯನ್ನು ಡಿಕೆನ್ ಮುಚೇನಾ ಹೆಸರಿನ ವ್ಯಕ್ತಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾತಲಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮುಚೇನಾ ಅವರು ಸ್ಪೀಡ್ಬೋಟ್ನಲ್ಲಿದ್ದ ನಾಲ್ವರಲ್ಲಿ ಒಬ್ಬರಾಗಿದ್ದು ಜಲಚರ ಜೀವಿಗಳನ್ನು ನೋಡಿ ಆನಂದಿಸುತ್ತಿದ್ದರು.