ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಇಂದು ತಮ್ಮ ಮಗುವಿನ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಮಗುವಿನ ಹೆಸರನ್ನೂ ಅಭಿಮಾನಗಳ ಎದುರು ರಿವೀಲ್ ಮಾಡಿದ್ದಾರೆ.
ಶ್ರೇಯಾ ಘೋಷಾಲ್ ಹಾಗೂ ಅವರ ಪತಿ ಶೀಲಾದಿತ್ಯ ಮಗುವನ್ನ ಹಿಡಿದುಕೊಂಡಿರುವ ಫೋಟೋವನ್ನ ಹಂಚಿಕೊಂಡಿರುವ ಶ್ರೇಯಾ ಮಗುವಿಗೆ ದೇವಯಾನ್ ಮುಖ್ಯೋಪಾಧ್ಯಾಯ ಎಂದು ಹೆಸರಿಟ್ಟಿರೋದಾಗಿ ಹೇಳಿದ್ದಾರೆ.
ಶ್ರೇಯಾ ಘೋಷಾಲ್ ಹಂಚಿಕೊಂಡಿರುವ ಈ ಫೋಟೋದಲ್ಲಿ ಮಗುವಿನ ಮುಖ ಗೋಚರವಾಗುತ್ತಿಲ್ಲ. ಶ್ರೇಯಾ ಮಗುವಿನ ಹೆಸರು ರಿವೀಲ್ ಮಾಡುತ್ತಿದ್ದಂತೆಯೇ ಅನೇಕರು ಹೆಸರಿನ ಅರ್ಥಕ್ಕಾಗಿ ಹುಡುಕಾಟ ನಡೆಸಿದ್ದಾರೆ. ದೇವಯಾನ್ ಎಂದರೆ ದೇವರುಗಳ ರಥ ಅಥವಾ ದೇವರುಗಳಿಗೆ ಸೇವೆ ಮಾಡುವುದು ಎಂಬರ್ಥವಿದೆ.
ಫೋಟೋ ಶೇರ್ ಮಾಡಿರುವ ಶ್ರೇಯಾ ಘೋಷಾಲ್, ನಿಮಗೆಲ್ಲಾ ದೇವಯಾನ್ ಮುಖ್ಯೋಪಾಧ್ಯಾಯನನ್ನ ಪರಿಚಯಿಸುತ್ತಿದ್ದೇನೆ. ಮೇ 22ರಂದು ನಮ್ಮ ಜೀವನಕ್ಕೆ ಎಂಟ್ರಿ ಕೊಟ್ಟ ಈತ ನಮ್ಮ ಜೀವನವನ್ನೇ ಬದಲಾಯಿಸಿಬಿಟ್ಟಿದ್ದಾನೆ. ಈತ ಹುಟ್ಟಿದ ದಿನದಿಂದಲೇ ಪ್ರೀತಿ ಹಾಗೂ ಮಮತೆಯನ್ನ ನಮ್ಮ ಹೃದಯದಲ್ಲಿ ತುಂಬಿಬಿಟ್ಟಿದ್ದಾನೆ. ಅದನ್ನ ಒಬ್ಬ ತಂದೆ – ತಾಯಿ ಸ್ಥಾನದಲ್ಲಿದ್ದವರು ಮಾತ್ರ ಅನುಭವಿಸೋಕೆ ಸಾಧ್ಯ ಎಂದು ಶೀರ್ಷಿಕೆ ನೀಡಿದ್ದಾರೆ .