ಕೊರೊನಾ ಎರಡನೆ ಅಲೆಯಿಂದ ಕಂಗೆಟ್ಟಿದ್ದ ಭಾರತ ಕ್ರಮೇಣವಾಗಿ ಸೋಂಕಿನಿಂದ ಗುಣಮುಖವಾಗ್ತಿದೆ. ದೈನದಿಂದ ಪ್ರಕರಣದಲ್ಲಿ ಕಳೆದ ನಾಲ್ಕು ವಾರಗಳಿಂದ ಇಳಿಕೆ ಕಂಡು ಬರ್ತಿದೆ. ಮಂಗಳವಾರದ ವೇಳೆಗೆ ಸತತ 54ನೇ ದಿನವೂ ದೇಶ ದೈನಂದಿನ ಪ್ರಕರಣದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆ ವರದಿಯಾಗಿದೆ.
ದೇಶದ ಬಹುತೇಕ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ದೈನಂದಿನ ಕೊರೊನಾ ಪ್ರಕರಣ ಇಳಿಮುಖವಾಗಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೇಂದ್ರ ಸರ್ಕಾರ ಕೊರೊನಾ ಲಸಿಕೆಯನ್ನ ತನ್ನ ಪ್ರಮುಖ ಅಸ್ತ್ರವಾಗಿಸಿಕೊಂಡಿದೆ. ಈಗಾಗಲೇ ಕೋವಿಡ್ ಲಸಿಕೆ ಹಂಚಿಕೆ ಪ್ರಮಾಣ 21.83 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 18 ರಿಂದ 44 ವರ್ಷದೊಳಗಿನ 9,50,401 ಮಂದಿ ಕೊರೊನಾ ಮೊದಲ ಡೋಸ್ ಹಾಗೂ 15,467 ಮಂದಿ ಕೊರೊನಾ ಎರಡನೆ ಲಸಿಕೆಯನ್ನ ಪಡೆದಿದ್ದಾರೆ.
ಅಲ್ಲದೇ ಹೆಚ್ಚುತ್ತಿರುವ ಕೊರೊನಾ ಪ್ರಕರಣದಿಂದಾಗಿ ಕೇಂದ್ರ ಸರ್ಕಾರ ಸಿಬಿಎಸ್ಇ 12ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನೂ ರದ್ದು ಮಾಡಿದೆ. ಈ ನಿರ್ಧಾರವನ್ನ ಎಲ್ಲಾ ರಾಜ್ಯಗಳು ಪ್ರಶಂಸಿದ್ದು ಈ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಠಿಯಿಂದ ಇದು ಸೂಕ್ತ ಕ್ರಮ ಎಂದು ಹೇಳಿವೆ.