ಮಹಿಳೆ ಗರ್ಭ ಧರಿಸಿದ ಸಂದರ್ಭದಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆ ಕೊಂಚ ಕಡಿಮೆ. ಆದರೆ ಸಾಮಾನ್ಯ ಮಹಿಳೆಯರಿಗೆ ಹೋಲಿಸಿದ್ರೆ ಕೋವಿಡ್ ಸಂಬಂಧಿ ಅನಾರೋಗ್ಯ ಗರ್ಭಿಣಿಯರಲ್ಲಿ ಹೆಚ್ಚಾಗಿ ಕಂಡು ಬರುತ್ತೆ. ಆದರೂ ಸಹ ಗರ್ಭಿಣಿ ಕೊರೊನಾ ಲಸಿಕೆಯನ್ನ ಸ್ವೀಕರಿಸಬಹುದು ಅನ್ನೋದಕ್ಕೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಇದಕ್ಕಾಗಿ ಕಳೆದ ಅನೇಕ ದಿನಗಳಿಂದ ಸಾಕಷ್ಟು ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಲೇ ಇದೆ. ಆದರೆ ಅಮೆರಿಕದಲ್ಲಿ ಗರ್ಭಿಣಿಯರಿಗೂ ಕೊರೊನಾ ಲಸಿಕೆಯನ್ನ ನೀಡಲಾಗುತ್ತೆ.
ಆದರೆ ದೇಶದಲ್ಲಿ ಇಲ್ಲಿಯವರೆಗೆ ಈ ರೀತಿಯ ಯಾವುದೇ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕೊರೊನಾ ಲಸಿಕೆಯನ್ನ ಗರ್ಭಿಣಿಯರಿಗೆ ನೀಡುವತ್ತ ಸರ್ಕಾರ ಗಮನ ಹರಿಸಬೇಕು ಅಂತಾ ಏಮ್ಸ್ ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ ಕೆಲ ದಿನಗಳ ಹಿಂದಷ್ಟೇ ಅಭಿಪ್ರಾಯ ಹೊರಹಾಕಿದ್ದರು.