alex Certify ಬರೋಬ್ಬರಿ 16 ವರ್ಷಗಳ ಬಳಿಕ ಒಂದಾದ ಸ್ನೇಹಿತೆಯರು: ಫೋಟೋ ವೈರಲ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 16 ವರ್ಷಗಳ ಬಳಿಕ ಒಂದಾದ ಸ್ನೇಹಿತೆಯರು: ಫೋಟೋ ವೈರಲ್​​

ಬಾಲ್ಯದ ದಿನಗಳಲ್ಲಿ ಸಿಗೋ ಸ್ನೇಹಿತರು ಕಾಲ ಕ್ರಮೇಣ ಎಲ್ಲೋ ಮರೆಯಾಗಿ ಬಿಡ್ತಾರೆ. ತರಗತಿಗಳು ಹಾಗೂ ಶಾಲೆಗಳು ಬದಲಾಗ್ತಾ ಇದ್ದಂತೆ ಸ್ನೇಹಿತರೂ ಸಹ ಬದಲಾಗ್ತಾ ಹೋಗ್ತಾರೆ. ಬಳಿಕ ಅವರು ನಮಗೆ ಸಿಗಬಹುದು ಅಥವಾ ಮತ್ತೆಂದಿಗೂ ಸಿಗದೇ ಕೂಡ ಹೋಗಬಹುದು.

ಇಲ್ಲೊಂದಿಬ್ಬರು ಸ್ನೇಹಿತೆಯರು ಬರೋಬ್ಬರಿ 16 ವರ್ಷದ ಬಳಿಕ ಒಬ್ಬರನ್ನೊಬ್ಬರು ಭೇಟಿಯಾಗಿದ್ದು ಈ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

ಟ್ವಿಟರ್​ ಬಳಕೆದಾರರಾಗಿರುವ ಮ್ಯಾಂಡಿ ಈ ಫೋಟೋವನ್ನ ಪೋಸ್ಟ್​ ಮಾಡಿದ್ದಾರೆ. ಇದರಲ್ಲಿ ಅವರು ತಮ್ಮ ಸ್ನೇಹಿತೆಯನ್ನ ಬರೋಬ್ಬರಿ 16 ವರ್ಷಗಳ ಬಳಿಕ ಭೇಟಿಯಾದ ಫೋಟೋವನ್ನ ಅಪ್​ಲೋಡ್​ ಮಾಡಿದ್ದಾರೆ. ಈ ಫೋಟೋಗೆ ಮ್ಯಾಂಡಿ, ನಾನು ನನ್ನ ಗೆಳತಿಯನ್ನ ಬರೋಬ್ಬರಿ 16 ವರ್ಷಗಳ ಬಳಿಕ ಭೇಟಿಯಾದೆ ಎಂದು ಶೀರ್ಷಿಕೆ ನೀಡಿದ್ದಾರೆ.

ಬಾಲ್ಯದ ದಿನಗಳಲ್ಲಿ ಸ್ನೇಹಿತೆಯರು ಒಟ್ಟಿಗಿದ್ದ ಫೋಟೋ ಹಾಗೂ ಈಗಿನ ಫೋಟೋ ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಪೋಸ್ಟ್​ ಬರೋಬ್ಬರಿ 245.6 ಸಾವಿರ ಲೈಕ್ಸ್ ಹಾಗೂ 17.7 ಸಾವಿರ ರಿಟ್ವೀಟ್​ಗಳನ್ನ ಸಂಪಾದಿಸಿದೆ.

https://twitter.com/mandyretsuko/status/1399157087268130816

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...