alex Certify ವಾರ್ತಾ ವಾಚಕಿ ಮಾಡಿದ ಯಡವಟ್ಟು ಜಾಲತಾಣದಲ್ಲಿ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರ್ತಾ ವಾಚಕಿ ಮಾಡಿದ ಯಡವಟ್ಟು ಜಾಲತಾಣದಲ್ಲಿ ವೈರಲ್

ವಿಶ್ವ ವಿಖ್ಯಾತ ಬರಹಗಾರ ವಿಲಿಯಂ ಶೇಕ್ಸ್‌ಪಿಯರ್‌ ಅವರು ಕೋವಿಡ್-19 ಲಸಿಕೆ ಪಡೆದ ಐದು ತಿಂಗಳ ಬಳಿಕ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಅರ್ಜೆಂಟೀನಾದ ಮಾಧ್ಯಮವೊಂದರಲ್ಲಿ ನೋಡಿದ ವೀಕ್ಷಕರು ತಲೆಗೆ ಹುಳ ಬಿಟ್ಟುಕೊಂಡಿದ್ದರು.

’ಇದೇನಪ್ಪಾ? ಇಲ್ಲೇನಾಯ್ತು?’ ಎಂದು ನೀವು ಅಚ್ಚರಿಪಡುತ್ತಿದ್ದರೆ, ಕೋವಿಡ್‌-19ಗೆ ಫೈಜರ್‌ ಲ್ಯಾಬ್‌ನ ಲಸಿಕೆ ಪಡೆದ ಬ್ರಿಟನ್‌ನ ಮೊದಲ ವ್ಯಕ್ತಿಯನ್ನು, ಬರಹಗಾರ ಶೇಕ್ಸ್‌ಪಿಯರ್‌ ಎಂದುಕೊಂಡು ಗೊಂದಲಕ್ಕೆ ಈಡಾಗಿದ್ದಾರೆ ಟಿವಿ ನಿರೂಪಕಿ. ಅಲ್ಲಿಂದ ಆದ ಎಡವಟ್ಟು ಈಗ ಎಲ್ಲಾ ಕಡೆ ವೈರಲ್ ಆಗಿದ್ದು, ಆನ್ಲೈನ್‌ನಲ್ಲಿ ಶೇರ್‌ ಆಗಿರುವ ಈ ವಿಡಿಯೋ ಕ್ಲಿಪ್ ನೋಡಿಕೊಂಡು ನೆಟ್ಟಿಗರು ನಕ್ಕೂ ನಕ್ಕೂ ಬಿದ್ದಿದ್ದಾರೆ.

ವಿಲಿಯಮ್ ’ಬಿಲ್’ ಶೇಕ್ಸ್‌ಪಿಯರ್‌ ಹೆಸರಿನ ವ್ಯಕ್ತಿಯೊಬ್ಬರು ಡಿಸೆಂಬರ್‌ 2020ರಲ್ಲಿ ಕೋವಿಡ್‌-19 ಲಸಿಕೆ ಪಡೆಯುವ ಮೂಲಕ, ಈ ಲಸಿಕೆ ಪಡೆದ ವಿಶ್ವದ ಮೊದಲಿಗ ಎಂದು ಹೆಸರಾಗಿದ್ದರು. ತಮ್ಮ ಈ ವಿಶಿಷ್ಟ ಹೆಸರಿನ ಕಾರಣದಿಂದ ಅವರು ಸಖತ್‌ ಟ್ರೆಂಡ್ ಆಗಿದ್ದರು. ಬಿಲ್‌ ಅವರು ವಯೋಸಹಜ ಕಾಯಿಲೆಯಿಂದಾಗಿ ಇಂಗ್ಲೆಂಡ್‌ನ ಕೊವಿಎಂಟ್ರೆಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಪ್ರಕಟಿಸಿದ್ದು, ಸುದ್ದಿಯಾಗಿತ್ತು.

https://twitter.com/aschapire/status/1398269689952935936?ref_src=twsrc%5Etfw%7Ctwcamp%5Etweetembed%7Ctwterm%5E1398269689952935936%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Fbizarre%2Fargentinian-news-anchor-confuses-shakespeares-while-reporting-uk-patients-death-7335222%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...