ಲಂಡನ್ನ ತಾಶಾ ಪ್ರಯಾಗ್ ಹೆಸರಿನ ಮಹಿಳೆಯೊಬ್ಬರು ತಮ್ಮ ಮನೆಗೆ ಬಂದ ಅನಿರೀಕ್ಷಿತ ಅತಿಥಿಯೊಬ್ಬರು ಬಂದು ವಾಶಿಂಗ್ ಮಷೀನ್ ಒಳಗಿನಿಂದ ಇಣುಕಿ ನೋಡುತ್ತಿದ್ದದ್ದನ್ನು ಕಂಡು ಶಾಕ್ ಆಗಿದ್ದಾರೆ. ಆ ಅತಿಥಿ ಯಾರೆಂದರೆ — ನರಿ…!
ಸೈಡ್ಲೋಡ್ನ ಈ ಮಷಿನ್ ಒಳಗೆ ಕುಳಿತಿದ್ದ ನರಿಯ ಚಿತ್ರವನ್ನು ಸೆರೆ ಹಿಡಿದು ಟ್ವಿಟರ್ನ ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ನತಾಶಾ. ನತಾಶಾ ಹಾಗೂ ಆಕೆಯ ಸಂಗಾತಿ ಆಡಮ್ ತಮ್ಮ ಕಾರಿನಿಂದ ಬ್ಯಾಗುಗಳನ್ನು ಅನ್ಲೋಡ್ ಮಾಡುತ್ತಿದ್ದ ವೇಳೆ ಈ ನರಿ ಮನೆಯೊಳಗೆ ಹೊಕ್ಕಿರಬಹುದು ಎನ್ನಲಾಗಿದೆ.
ಮನೆಯೊಳಗೆ ಅವಿತುಕೊಳ್ಳಲು ಸುರಕ್ಷಿತ ಜಾಗವೊಂದನ್ನು ಹುಡುಕುತ್ತಿದ್ದ ನರಿ ಕಣ್ಣಿಗೆ ಬಿದ್ದಿDE ವಾಶಿಂಗ್ ಮಷೀನ್. ನತಾಶಾರನ್ನು ನೋಡಿದ ಕೂಡಲೇ ಮನೆಯಿಂದ ಆಚೆ ಓಡಿ ಹೋಗುವ ಮುನ್ನ ನರಿಯ ಚಿತ್ರವನ್ನು ಸೆರೆ ಹಿಡಿಯಲಾಗಿದೆ.