ಬೆಂಗಳೂರು: ಸರ್ಕಾರದ ಉಚಿತ ವ್ಯಾಕ್ಸಿನ್ ನನ್ನು ಕಮಿಷನ್ ಪಡೆದು ಶಾಸಕ ರವಿ ಸುಬ್ರಹ್ಮಣ್ಯ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು, ಇದು ತನ್ನ ವಿರುದ್ಧ ಮಾಡಿರುವ ಷಡ್ಯಂತ್ರ ಎಂದು ಗುಡುಗಿದ್ದಾರೆ.
ಶಬ್ದ ಮಾಲಿನ್ಯ ಮಾಡಿದ್ರೆ ಈ ರಾಜ್ಯದಲ್ಲಿ ವಿಧಿಸಲಾಗುತ್ತೆ ಭಾರೀ ದಂಡ…..!
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ರವಿ ಸುಬ್ರಹ್ಮಣ್ಯ, ಲಸಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಮಹಾನುಭಾವ ಯಾರೆಂಬುದು ನನಗೆ ಗೊತ್ತಿಲ್ಲ. ಆತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದಿದ್ದಾರೆ.
ತಾಯಿ ಅಂತ್ಯಸಂಸ್ಕಾರ ಮುಗಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಅಧಿಕಾರಿ
ಆಸ್ಪತ್ರೆ ಸಿಬ್ಬಂದಿಯೇ ಬಾಯ್ಬಿಟ್ಟಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ನನ್ನ ವಿರುದ್ಧದ ಆರೋಪ ನಿರಾಧಾರ, ನಮ್ಮ ಕೈಯಿಂದಲೇ ಹಣ ಖರ್ಚುಮಾಡಿ ಲಸಿಕೆ ತರಿಸಿ ಜನರ ಜೀವ ಉಳಿಸುವ ಯತ್ನ ಮಾಡುತ್ತಿದ್ದೇವೆ ಹೊರತು ಉಚಿತವಾಗಿ ನೀಡುವ ಲಸಿಕೆಗೂ ಕಮಿಷನ್ ಪಡೆಯುವ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ. ಆರೋಪ ಮಾಡಿದ ವ್ಯಕ್ತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.