ಕೋವಿಡ್ ಕಾರಣದಿಂದಾಗಿ ಇಂದು ದೇಶ ಕಂಡ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ 57ನೇ ಪುಣ್ಯಸ್ಮರಣೆ ಇದ್ದರೂ ಸಹ ಯಾವುದೇ ಕಾರ್ಯಕ್ರಮಗಳನ್ನ ನಡೆಸೋಕೆ ಸಾಧ್ಯವಾಗ್ತಿಲ್ಲ. ಹೀಗಾಗಿ ಅನೇಕ ಸಚಿವರು ಹಾಗೂ ರಾಜಕಾರಣಿಗಳು ಸೋಶಿಯಲ್ ಮೀಡಿಯಾದ ಮೂಲಕವೇ ನೆಹರೂರಿಗೆ ನಮನ ಸಲ್ಲಿಸಿದ್ದಾರೆ.
ಸಂಸದ ಶಶಿ ತರೂರ್ ಸಹ ನೆಹರೂ ಪುಣ್ಯಸ್ಮರಣೆ ಮಾಡಿದ್ದು ವಿಶೇಷವಾದ ಫೋಟೋವೊಂದನ್ನ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ.
ದೇಶ ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಸಾಹಿತ್ಯದ ಗುರುದೇವ್ ರವೀಂದ್ರನಾಥ್ ಠಾಗೂರ್ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರನ್ನ ಹೊಗಳಿ ಬರೆದಿರುವ ಪತ್ರದ ಫೋಟೋವೊಂದನ್ನ ಈ ದಿನದಂದು ಶಶಿ ತರೂರ್ ಶೇರ್ ಮಾಡಿದ್ದಾರೆ.
ಈ ಪತ್ರದಲ್ಲಿ ರವೀಂದ್ರನಾಥ್ ಠಾಗೂರ್: ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಎನಿಸುತ್ತಿದೆ. ನಿಮ್ಮ ಸಾಧನೆಯ ಹಾದಿಯಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಈ ಪತ್ರದಲ್ಲಿ ನೆಹರೂ ಅವರ ಸಾಧನೆಗಳನ್ನ ಕೊಂಡಾಡಿದ್ದಾರೆ. ಅಂದ ಹಾಗೆ ಈ ಪತ್ರವನ್ನ ಮೇ 31 – 1936ರಲ್ಲಿ ಶಾಂತಿನಿಕೇತನದಲ್ಲಿರುವ ಠಾಗೂರ್ ನಿವಾಸದಿಂದ ಬರೆಯಲಾಗಿದೆ.
ಈ ಪತ್ರದ ಫೋಟೋವನ್ನ ಹಂಚಿಕೊಂಡಿರುವ ತರೂರ್, 1936ರಲ್ಲಿ ನೆಹರೂ ಅವರ ಆತ್ಮ ಚರಿತ್ರೆಯನ್ನ ಓದಿದ ಬಳಿಕ ಗುರುದೇವ ರವೀಂದ್ರನಾಥ್ ಠಾಗೂರ್ ಬರೆದ ಸಾಲುಗಳು ಇದಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.