ಬೆಂಗಳೂರು: ರಾಜ್ಯ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದ್ದ ಯುವತಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಆರೋಪಿಗಳ ಬಂಧನದ ಬೆನ್ನಲ್ಲೇ ಆಘಾತಕಾರಿ ಮಾಹಿತಿಗಳು ಬಹಿರಂಗವಾಗಿವೆ.
ಕಣ್ಣೆದುರೇ ಮನೆ ಕುಸಿದರೂ ಕೂಲಾಗಿ ನಡೆದುಕೊಂಡು ಹೋದ ಭೂಪ
ಬಾಂಗ್ಲಾದೇಶದ ಯುವತಿ ಮೇಲೆ ಆಕೆಯ ಸ್ನೇಹಿತರೇ ಪೈಶಾಚಿಕ ಕೃತ್ಯವೆಸಗಿದ್ದರು. ಆರೋಪಿಗಳು ಹಾಗೂ ಸಂತ್ರಸ್ತ ಯುವತಿ ಎಲ್ಲರೂ ರಾಮಮೂರ್ತಿ ನಗರದ ಎನ್ ಆರ್ ಕಾಲೋನಿಯಲ್ಲಿ ವಾಸವಾಗಿದ್ದುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಸಂತ್ರಸ್ತ ಯುವತಿಯೇ ವೇಶ್ಯಾವಾಟಿಕೆ ಗ್ಯಾಂಗ್ ನ ಕಿಂಗ್ ಪಿನ್ ಆಗಿರುವ ಶಂಕೆ ಕೂಡ ವ್ಯಕ್ತವಾಗಿದೆ.
ಅಜ್ಜಿ – ತಾತನ ಜೊತೆ ಮೊಮ್ಮಕ್ಕಳ ಮಸ್ತಿ: ವಿಡಿಯೋ ವೈರಲ್
ಇಬ್ಬರು ಯುವತಿಯರು ಹಾಗೂ 6 ಜನ ಯುವಕರ ಗ್ಯಾಂಗ್ ಈ ದಂಧೆಯಲ್ಲಿ ಭಾಗಿಯಾಗಿದ್ದು, ಪರಸ್ಪರ ವೈಮನಸ್ಯ ಆರಂಭವಾಗಿದೆ. ಧ್ವೇಷದ ಕಾರಣಕ್ಕೆ ತಮ್ಮದೇ ಗ್ಯಾಂಗ್ ನ ಯುವತಿ ಮೇಲೆ ಅಟ್ಟಹಾಸ ಮೆರೆದಿದ್ದಾರೆ. 6 ಯುವಕರು ಯುವತಿಯನ್ನು ಕಟ್ಟಿಹಾಕಿ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಆರೋಪಿಗಳು ಕೂಡ ಬಾಂಗ್ಲಾ ದೇಶದವರೇ ಆಗಿದ್ದು, ಎಲ್ಲರೂ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದರಲ್ಲದೇ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ವಾಸವಾಗಿದ್ದರು.