ಇನ್ಫೋಸಿಸ್ ಸಹ ಸಂಸ್ಥಾಪಕ ಎಸ್.ಡಿ. ಶಿಬುಲಾಲ್ ಎರಡನೆ ಬಾರಿಗೆ ಮುಕ್ತ ಮಾರುಕಟ್ಟೆ ವ್ಯವಹಾರದ ಮೂಲಕ ಭಾರೀ ಮೊತ್ತದ ಷೇರುಗಳನ್ನ ಖರೀದಿ ಮಾಡಿದ್ದಾರೆ.
ಎಸ್.ಡಿ. ಶಿಬುಲಾಲ್ ತಮ್ಮ ಪತ್ನಿ ಕಡೆಯಿಂದ ಬರೋಬ್ಬರಿ 100 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನ ಖರೀದಿ ಮಾಡಿದ್ದಾರೆ. ಈ ಮೂಲಕ ಶಿಬುಲಾಲ್ ಪತ್ನಿಯಿಂದ ಒಂದೇ ವಾರದಲ್ಲಿ ಎರಡು ಬಾರಿ ಭಾರೀ ಮೊತ್ತದ ಷೇರುಗಳನ್ನ ಖರೀದಿ ಮಾಡಿದಂತಾಗಿದೆ.
ಮೇ 27ರಂದು ಮುಕ್ತ ಮಾರುಕಟ್ಟೆಯ ಮೂಲಕ ಕುಮಾರಿ ಶಿಬುಲಾಲ್ ಕಡೆಯಿಂದ ಇನ್ಫೋಸಿಸ್ನ 7,22,545 ಇಕ್ವಿಟಿ ಷೇರುಗಳನ್ನ ಖರೀದಿ ಮಾಡಿದ್ದೇವೆ ಎಂದು ರೆಗ್ಯುಲೇಟರಿ ಫೈಲಿಂಗ್ನಲ್ಲಿ ಎಸ್.ಡಿ. ಶಿಬುಲಾಲ್ ತಿಳಿಸಿದ್ದಾರೆ. ಈ ಮೂಲಕ ಕಂಪನಿಯಲ್ಲಿ ಶಿಬುಲಾಲ್ರ ಷೇರು ಪಾಲು 0.12 ಪ್ರತಿಶತಕ್ಕೆ ಏರಿಕೆ ಕಂಡಿದೆ.