ಬಾಲಿವುಡ್ ಬ್ಯೂಟಿ ಕ್ವೀನ್ ಐಶ್ವರ್ಯಾ ರೈ ಬಚ್ಚನ್ ಹಾಗೂ ಜಯಾ ಬಚ್ಛನ್ ಫೇಮಸ್ ಅತ್ತೆ – ಸೊಸೆಯಂದಿರು ಅಂದರೆ ತಪ್ಪಾಗಲಿಕ್ಕಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರವಲ್ಲದೇ ಮನೆಯಲ್ಲಿಯೂ ಸಹ ಐಶ್ವರ್ಯಾ ಹಾಗೂ ಜಯಾ ಬಚ್ಛನ್ ಸಖತ್ ಫ್ರೆಂಡ್ಲಿಯಾಗಿ ಇರ್ತಾರಂತೆ..! ಎಷ್ಟೋ ಬಾರಿ ಅಭಿಷೇಕ್ ಬಚ್ಚನ್ ವಿರುದ್ಧವೇ ಅತ್ತೆ ಸೊಸೆ ಜೋಡಿಯಾಗಿ ಸೆಣಸಾಡ್ತಾರಂತೆ.
ಯಾವಾಗೆಲ್ಲ ಅಭಿಷೇಕ್ ಬಚ್ಚನ್ಗೆ ಗೊತ್ತಾಗದ ಹಾಗೆ ಮಾತಾನಾಡಬೇಕೆಂದೆನಿಸುತ್ತೋ ಆಗೆಲ್ಲ ಜಯಾ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಇಬ್ಬರೂ ಬಂಗಾಳಿ ಭಾಷೆಯಲ್ಲಿ ಮಾತನಾಡಿಕೊಳ್ತಾರಂತೆ.
ಹಳೆಯ ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಛನ್ ಈ ವಿಚಾರವನ್ನ ಶೇರ್ ಮಾಡಿದ್ದಾರೆ. ನನ್ನ ವಿರುದ್ಧ ಮಾತನಾಡುವಾಗೆಲ್ಲ ನನ್ನ ಪತ್ನಿ ಹಾಗೂ ಅಮ್ಮ ಬಂಗಾಳಿ ಭಾಷೆಯಲ್ಲಿ ಮಾತನಾಡಿಕೊಳ್ತಾರೆ. ಜಯಾ ಬಚ್ಛನ್ ಬಂಗಾಳಿ ಭಾಷೆಯನ್ನ ನಿರರ್ಗಳವಾಗಿ ಮಾತನಾಡ್ತಾರೆ. ಐಶ್ವರ್ಯಾ ರೈ ಚೋಕರ್ ಬಾಲಿ ಸಿನಿಮಾಶೂಟಿಂಗ್ ವೇಳೆ ಬಂಗಾಲಿ ಭಾಷೆಯನ್ನ ಕಲಿತಿದ್ದಾರೆ.
ಅಭಿಷೇಕ್ ಬಚ್ಚನ್ ಶೀಘ್ರದಲ್ಲೇ ಬಾಬ್ ಬಿಸ್ವಾಸ್ ಸಿನಿಮಾ ಮೂಲಕ ಜನರ ಮುಂದೆ ಬರಲಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಜೊತೆ ಚಿತ್ರಾಂಗದಾ ಸಿಂಗ್ ಕಾಣಿಸಿಕೊಂಡಿದ್ದಾರೆ.