ವೈದ್ಯರು ಆಪರೇಷನ್ ಮಾಡುವ ವೇಳೆಯಲ್ಲಿ ರೋಗಿಗೆ ಅರವಳಿಕೆ ಚುಚ್ಚುಮದ್ದನ್ನ ನೀಡಲಾಗಿರುತ್ತೆ. ರೋಗಿಗೆ ನೋವು ತಿಳಿಯಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿರುತ್ತೆ.
ಆದರೆ 30 ವರ್ಷದ ವ್ಯಕ್ತಿಯೊಬ್ಬ ಎಚ್ಚರದಲ್ಲೇ ಇದ್ದು ಮೆದುಳಿನಲ್ಲಿ ಬೆಳೆದಿದ್ದ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೇ ವೈದ್ಯರು ಗಡ್ಡೆ ತೆಗೆಯುತ್ತಿದ್ದ ವೇಳೆ ಬೆಡ್ನಲ್ಲಿ ಮಲಗಿದ್ದ ಈತ ಜೋಕ್ ಮಾಡುತ್ತಿದ್ದನಂತೆ..!
ಇದು ಮೆದುಳಿನ ಶಸ್ತ್ರಚಿಕಿತ್ಸೆಯಾಗಿದ್ದರಿಂದ ಆಪರೇಷನ್ ವೇಳೆಯಲ್ಲಿ ಮೆದುಳಿಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನ ಕನ್ಫರ್ಮ್ ಮಾಡಿಕೊಳ್ಳುವ ಸಲುವಾಗಿ ಶ್ಯಾನಿಗೆ ಎಚ್ಚರದಿಂದ ಇರುವಂತೆ ಹೇಳಲಾಗಿತ್ತು.
ಹೀಗಾಗಿ ಶ್ಯಾನಿ ತಲೆಬುರುಡೆಯನ್ನ ವೈದ್ಯರು ಓಪನ್ ಮಾಡಿದ್ದರೂ ಸಹ ಆತ ಜೋಕ್ ಮಾಡುತ್ತಲೇ ಇದ್ದ. ನ್ಯಾಟಿಂಗ್ಯಾಮ್ನ ಕ್ವೀನ್ಸ್ ಮೆಡಿಕಲ್ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನ ನಡೆಸಲಾಗಿದೆ.