ಹೆತ್ತ ಮಕ್ಕಳಿಂದಲೇ ಬೀದಿಗೆ ಬಿದ್ದ ವೃದ್ದ…! ಜೀವನೋಪಾಯಕ್ಕಾಗಿ ಇಳಿವಯಸ್ಸಿನಲ್ಲೂ ಪೇಂಟಿಂಗ್ ಮಾರಾಟ 26-05-2021 4:48PM IST / No Comments / Posted In: Latest News, India ಕೊರೊನಾದಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಜನ ಸಾಮಾನ್ಯನ ಜೀವನ ಕೊಂಚ ಕಷ್ಟದಲ್ಲೇ ಸಾಗ್ತಿದೆ. ಲಾಕ್ಡೌನ್, ಆರ್ಥಿಕ ಸಂಕಷ್ಟದಿಂದಾಗಿ ಅನೇಕರು ತಮ್ಮ ಒಂದೊತ್ತಿನ ಊಟಕ್ಕೂ ಪರಿತಪಿಸುವ ಸ್ಥಿತಿ ಎದುರಾಗಿದೆ. ಇದೇ ಸಾಲಿಗೆ ಕಲಾವಿದ ಸುನಿಲ್ ಪಾಲ್ ಎಂಬವರು ಕೂಡ ಸೇರಿದ್ದು ಜೀವನ ಸಾಗಿಸಲಿಕ್ಕಾಗಿ ಇವರು ಬೀದಿಯಲ್ಲಿ ತಮ್ಮ ಪೇಂಟಿಂಗ್ಸ್ನ್ನು ಮಾರುತ್ತಿದ್ದಾರೆ. ಟ್ವಿಟರ್ನಲ್ಲಿ ಶೇರ್ ಮಾಡಲಾದ ಪೋಸ್ಟ್ನಲ್ಲಿ ಕೊಲ್ಕತ್ತಾದ ಈ ಕಲಾವಿದ ಜೀವನೋಪಾಯಕ್ಕಾಗಿ ಇಳಿವಯಸ್ಸಿನಲ್ಲೂ ಎಷ್ಟು ಕಷ್ಟ ಪಡ್ತಿದ್ದಾರೆ ಅನ್ನೋದನ್ನ ಬಣ್ಣಿಸಲಾಗಿದೆ. ಸ್ವಂತ ಮಕ್ಕಳೇ ಮನೆಯಿಂದ ಹೊರಹಾಕಿರೋದ್ರಿಂದ ವೃದ್ದಾಪ್ಯದಲ್ಲೂ ಜೀವನೋಪಾಯಕ್ಕೆ ಏನಾದರೂ ಮಾಡಲೇಬೇಕಾದ ಅನಿವಾರ್ಯತೆ ಸುನೀಲ್ ಅವರಿಗಿತ್ತು. ಹೀಗಾಗಿ ಕೊಲ್ಕತ್ತಾದ ವಿವಿಧ ಏರಿಯಾಗಳಲ್ಲಿ ಕೂತು ತಮ್ಮ ಪೇಂಟಿಂಗ್ಗಳನ್ನ ಕೇವಲ 50 ಹಾಗೂ 100 ರೂಪಾಯಿಗಳಿಗೆ ಮಾರಾಟ ಮಾಡ್ತಾರೆ. ಕೋವಿಡ್ನಿಂದಾಗಿ ವೃದ್ಧರಿಗೆ ಮನೆಯಲ್ಲೇ ಇರಬೇಕು ಎಂದು ತಜ್ಞರು ಸಲಹೆ ನೀಡಿದ್ದರೂ ಸಹ ಹಣಕ್ಕಾಗಿ ಬೀದಿ ಬೀದಿ ಅಲೆಯಲೇಬೇಕಾದ ಅನಿವಾರ್ಯತೆ ಸುನೀಲ್ರಿಗಿದೆ. ಟ್ವಿಟರ್ನಲ್ಲಿ ಸುನೀಲ್ರ ಬಗೆಗಿನ ಪೋಸ್ಟ್ಗಳು ವೈರಲ್ ಆಗುತ್ತಿದ್ದಂತೆಯೇ ಅನೇಕರು ಕಲಾವಿದ ಸುನೀಲ್ರ ಸಹಾಯಕ್ಕೆ ಧಾವಿಸಿದ್ದಾರೆ. Artist Sunil Pal sits in front of Axis Bank, Gol Park, #Kolkata with his beautiful creations, after his kids abandoned himSelling the wonderful pieces of art at only ₹50-100 This is his fight to earn his daily bread, so, if you're in Kolkata, pls buy his art🙏@abhijitmajumder pic.twitter.com/ig3BFqiEvo — Sajeda Akhtar (@Sajeda_Akhtar) May 24, 2021