ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಕೇಂದ್ರ ನೌಕರರ ಪ್ರಿಯ ಭತ್ಯೆ ಜುಲೈ 1 ರಿಂದ ಏರಿಕೆಯಾಗಲಿದೆ. ನೌಕರರ ಪ್ರಿಯ ಭತ್ಯೆ ಶೇಕಡಾ 28ರಷ್ಟಾಗಲಿದೆ. ಈ ಏರಿಕೆ ವೇತನದ ಹೆಚ್ಚಳದೊಂದಿಗೆ ಸಿಗಲಿದೆ.
ಇದಲ್ಲದೆ ನೌಕರರಿಗೆ ಇನ್ನೊಂದು ಒಳ್ಳೆ ಸುದ್ದಿಯಿದೆ. ಮುಂದೂಡಲಾಗಿದ್ದ ಮೂರು ಕಂತುಗಳನ್ನು ಸಹ ನೀಡಲಾಗುವುದು. ಸದ್ಯ ಶೇಕಡಾ 11ರ ದರದಲ್ಲಿ ಡಿಎ ನೀಡಲಾಗುವುದು. ಇನ್ಮುಂದೆ ಅದನ್ನು 28 ಕ್ಕೆ ಹೆಚ್ಚಿಸಲಾಗಿದೆ. ಈ ಏರಿಕೆ ನಂತ್ರ ನೌಕರರ ವೇತನದಲ್ಲಿ ಭಾರಿ ಏರಿಕೆ ಕಂಡುಬರಲಿದೆ. ನೌಕರರು ಎರಡು ವರ್ಷಗಳ ಡಿಎ ಲಾಭವನ್ನು ನೇರವಾಗಿ ಪಡೆಯಲಿದ್ದಾರೆ.
2020 ರ ಜನವರಿಯಲ್ಲಿ ಕೇಂದ್ರ ನೌಕರರ ಪ್ರಿಯ ಭತ್ಯೆ ಶೇಕಡಾ 4 ರಷ್ಟು ಹೆಚ್ಚಾಗಿದೆ. ದ್ವಿತೀಯಾರ್ಧದಲ್ಲಿ ಶೇಕಡಾ 3 ರಷ್ಟು ಹೆಚ್ಚಳವಾಗಿದೆ. ಆದ್ರೆ ಈ ಹೆಚ್ಚಳದ ಹಣ ಇನ್ನೂ ನೌಕರರಿಗೆ ಸಿಕ್ಕಿಲ್ಲ. ಕೇಂದ್ರ ನೌಕರರ ಕನಿಷ್ಠ ವೇತನ 18000 ರೂಪಾಯಿ. ಶೇಕಡಾ 15ರಷ್ಟು ಪ್ರಿಯ ಭತ್ಯೆಯನ್ನು ಸೇರಿಸುವ ನಿರೀಕ್ಷೆಯಿದೆ. ಅಂದ್ರೆ ತಿಂಗಳಿಗೆ 2700 ರೂಪಾಯಿ ವೇತನ ಸಿಗಲಿದೆ. ವಾರ್ಷಿಕವಾಗಿ ನೋಡಿದ್ರೆ ಒಟ್ಟು ಪ್ರಿಯ ಭತ್ಯೆ 32400 ರೂಪಾಯಿಯಾಗಲಿದೆ.