ಅಮೆರಿಕ ಏರ್ಲೈನ್ಸ್ ವಿಮಾನದಲ್ಲಿ ಟೋಕಿಯೋದಿಂದ ಡಲ್ಲಾಸ್ಗೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ತನ್ನ ಮೊಬೈಲ್ ಫೋನ್ ಚಾರ್ಜ್ ಆಗೋದನ್ನ ನಿಲ್ಲಿಸಿದೆ ಎಂಬ ಕಾರಣಕ್ಕೆ ವಿಮಾನವನ್ನೇ ಹಿಂತಿರುಗುವಂತೆ ಮಾಡಿದ್ದಾಳೆ. ಕಳೆದ ವಾರ ಈ ಘಟನೆ ನಡೆದಿದ್ದು ಈ ಅಶಿಸ್ತಿನ ಪ್ರಯಾಣಿಕೆ ಇದೀಗ ಫೆಡರಲ್ ಆರೋಪ ಎದುರಿಸುತ್ತಿದ್ದಾಳೆ.
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: BPL ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೂ ರೇಷನ್ ವಿತರಣೆ
26 ವರ್ಷದ ವಾಲ್ಕಾ ಸುಜುಕಿ ಎಂಬಾಕೆ ತನ್ನ ಸೀಟಿನಲ್ಲಿ ಚಾರ್ಜರ್ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಗರಂ ಆಗಿದ್ದಳು. ಈಕೆ ವಿಮಾನಯಾನ ಸಿಬ್ಬಂದಿ ಬಳಿ ತನ್ನ ಫೋನ್ ಚಾರ್ಜ್ ಆಗುತ್ತಿಲ್ಲ ಎಂದು ಹೇಳಿದ್ದಾಳೆ. ಅಲ್ಲದೇ ಈ ಕಾರಣಕ್ಕೆ ಭಾರೀ ಸಿಟ್ಟಾಗಿದ್ದ ವಾಲ್ಗಾ ವಿಮಾನದಲ್ಲಿ ರಂಪಾಟವನ್ನೇ ಮಾಡಿದ್ದಾಳೆ.
ಗಮನಿಸಿ…! ಬ್ಯಾಂಕ್, LIC ವ್ಯವಹಾರದ ವೇಳೆ ಬದಲಾವಣೆ: ಬೆಳಗ್ಗೆ 8 ರಿಂದ 12 ಗಂಟೆಗೆ ಸಮಯ ನಿಗದಿ
ವಿಮಾನದ ಮುಂಭಾಗದ ಕಡೆಗೆ ಓಡಿದ ಸುಜುಕಿ ಸಿಬ್ಬಂದಿಯನ್ನ ಬದಿಗೆ ಸರಿಸಿ ಕಾಕ್ಪಿಟ್ ಬಾಗಿಲನ್ನ ಬಡಿದು ತನ್ನ ಫೋನ್ ಚಾರ್ಜ್ ಆಗುತ್ತಿಲ್ಲ ಎಂದು ಹೇಳಿದ್ದಾಳೆ. ವಿಮಾನಯಾನ ಸಿಬ್ಬಂದಿಗೆ ಯುವತಿಯನ್ನ ಶಾಂತಗೊಳಿಸಲು ಯತ್ನಿಸಿದ್ರೂ ಸಹ ಆಕೆ ಮಾತ್ರ ಕಿರುಚಾಡೋದನ್ನ ಮುಂದುವರಿಸಿದ್ದಾಳೆ. ಈ ಕಾರಣದಿಂದಾಗಿ ವಿಮಾನವನ್ನ ಹಿಂತಿರುಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಗಲಾಟೆ ವೇಳೆ ಸುಜುಕಿ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.