ಹಾಸನ: ಕೊರೊನಾ ಎರಡನೇ ಅಲೆ ನಡುವೆ ಬ್ಲ್ಯಾಕ್ ಫಂಗಸ್ ಅಟ್ಟಹಾಸ ಹೆಚ್ಚುತ್ತಿದ್ದು, ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಮುಖ್ಯಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಈ ಕಾರಣಕ್ಕೆ ವೈರಲ್ ಆಗಿದೆ ಫರ್ನಿಚರ್ ಅಂಗಡಿಯೊಂದರ ಜಾಹೀರಾತು….!
ಹಾಸನದಲ್ಲಿ ಮಾತನಾಡಿದ ರವಿಕುಮಾರ್, ಬ್ಲ್ಯಾಕ್ ಫಂಗಸ್ ಗೆ ಔಷಧ ಬಂದಿದೆ. ರಾಜ್ಯದ ಜನತೆ ಆತಂಕ್ಕೀಡಾಗುವ ಅಗತ್ಯವಿಲ್ಲ. ಮೆಡಿಕಲ್ ಕಾಲೇಜುಗಳಿರುವ ಕಡೆಗಳಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳನ್ನು ಅಲ್ಲಿಯೇ ಚಿಕಿತ್ಸೆಗೊಳಪಡಿಸಲಾಗುವುದು. ಅಂತಹ ಸೋಂಕಿತರನ್ನು ಬೇರೆಡೆ ಶಿಫ್ಟ್ ಮಾಡುವಂತಿಲ್ಲ ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದರು.
ತಂದೆಯ ಕಾರು ಸ್ವಚ್ಛಗೊಳಿಸುವ ವೇಳೆ ಸಿಗ್ತು ಕಂತೆ ಕಂತೆ ನೋಟು….!
ಲಸಿಕೆ ವಿಚಾರವಾಗಿ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರಿಗೆ ರಾಜ್ಯ ಸರ್ಕಾರ ಲಸಿಕೆ ಖರೀದಿಸಿ ನೀಡಲಿದೆ. ಆದ್ಯತೆ ಮೇರೆಗೆ ವ್ಯಾಕ್ಸಿನ್ ಹಂತ ಹಂತವಾಗಿ ಕೊಡಲಾಗುತ್ತದೆ ಎಂದು ಹೇಳಿದರು.