alex Certify ಈ ಕಾರಣಕ್ಕೆ ವೈರಲ್​ ಆಗಿದೆ ಫರ್ನಿಚರ್​ ಅಂಗಡಿಯೊಂದರ ಜಾಹೀರಾತು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ವೈರಲ್​ ಆಗಿದೆ ಫರ್ನಿಚರ್​ ಅಂಗಡಿಯೊಂದರ ಜಾಹೀರಾತು….!

ಟ್ರೋಲಿಗರಿಗೆ ಒಂದು ವಿಚಾರ ಸಿಗ್ತು ಅಂದರೆ ಸಾಕು. ಆ ವಿಚಾರದಿಂದ ಯಾವ್ಯಾವ ರೀತಿಯಲ್ಲಿ ಫನ್​ ಮಾಡಬೇಕೋ ಆ ಎಲ್ಲಾ ರೀತಿಯಲ್ಲಿ ಮಾಡ್ತಾರೆ.

ಇದೀಗ ಸದ್ಯ ಬಾಂಗ್ಲಾದೇಶದ ಫರ್ನಿಚರ್​ ಶಾಪ್​ನ ಜಾಹಿರಾತಿನ ವಿಡಿಯೋವೊಂದು ಟ್ರೋಲಿಗರ ಬಾಯಿಗೆ ಬಾಡೂಟದಂತೆ ಬಂದು ಬಿದ್ದಿದೆ. ಗಾಜಿಪುರದಲ್ಲಿರುವ ಕಕೊಲಿ ಫರ್ನಿಚರ್​ ಅಂಗಡಿಗೆ ಸೇರಿದ ಈ ಜಾಹಿರಾತು ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಇಬ್ಬರು ಹೆಣ್ಣು ಮಕ್ಕಳು ಫರ್ನಿಚರ್​ ಮೇಲೆ ಕುಳಿತುಕೊಂಡು ಪದೇ ಪದೇ ದಾಮೆ ಕೊಮ್​ ಮಾನೆ ಭಾಲೋ ಕಕೊಲಿ ಫರ್ನಿಚರ್​ ( ಕಡಿಮೆ ಬೆಲೆ ಎಂದರೆ ಅದು ಕಾಕೊಲಿ ಫರ್ನಿಚರ್​) ಎಂದು ಹೇಳಿದ್ದಾರೆ.

ಫರ್ನಿಚರ್​ಗಳ ಮೇಲೆ ಕುಣಿದಾಡುತ್ತಾ, ಖುರ್ಚಿಯ ಮೇಲೆ ಕೂತುಕೊಂಡು ಮಕ್ಕಳು ಪದೇ ಪದೇ ಇದೊಂದೇ ವ್ಯಾಕ್ಯವನ್ನ ಹೇಳಿದ್ದಾರೆ. ಈ ಜಾಹಿರಾತಿನ ಧ್ವನಿಯನ್ನ ಬಳಿಸಿಕೊಂಡಿರುವ ಟ್ರೋಲಿಗರು ಇದಕ್ಕೆ ಮಿ.ಬೀನ್​, ಸೌತ್ ಕೊರಿಯನ್​ ಬಾಯ್ಸ್ ಬ್ಯಾಂಡ್​ ದೃಶ್ಯಕ್ಕೆ ಥಳಕು ಹಾಕುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ದೀಪಿಕಾ ಪಡುಕೊಣೆಯನ್ನೂ ಈ ಟ್ರೋಲ್​ಗೆ ಬಳಸಿಕೊಳ್ಳಲಾಗಿದೆ.

https://www.facebook.com/kakoli.furniture.3/videos/776639686569019/?t=27

https://www.facebook.com/apu247/videos/1117707285378160/?t=0

https://www.facebook.com/arnabchopranew/videos/139174928198862/?t=0

https://twitter.com/i/status/1395020753930575878

https://www.facebook.com/100050256372675/videos/335519668133243/?t=1

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...