alex Certify ಕೊರೊನಾ ಓಡಿಸಲು ರಸ್ತೆ ರಸ್ತೆಗಳಲ್ಲಿ ಹೋಮ: ಶಿವಾಜಿ ಗಾರ್ಡನ್ ಸುತ್ತಮುತ್ತ 50 ಕಡೆ ಹೋಮ ಮಾಡಿಸಿದ ಬಿಜೆಪಿ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಓಡಿಸಲು ರಸ್ತೆ ರಸ್ತೆಗಳಲ್ಲಿ ಹೋಮ: ಶಿವಾಜಿ ಗಾರ್ಡನ್ ಸುತ್ತಮುತ್ತ 50 ಕಡೆ ಹೋಮ ಮಾಡಿಸಿದ ಬಿಜೆಪಿ ಶಾಸಕ

ಬೆಳಗಾವಿ: ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸಾವು-ನೋವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಜನ ಪ್ರತಿನಿಧಿಗಳೇ ಮೌಢ್ಯವನ್ನು ಬಿತ್ತಲು ಆರಂಭಿಸಿದ್ದಾರೆಯೇ ಎಂಬ ಅನುಮಾನವೂಂದು ಮೂಡುತ್ತಿದೆ ಇದಕ್ಕೆ ಬಿಜೆಪಿ ಶಾಸಕರೊಬ್ಬರು ರಸ್ತೆ ರಸ್ತೆಗಳಲ್ಲಿ, ಓಣಿ ಓಣಿಗಳಲ್ಲಿ ಮಾಡಿಸಿದ ಹೋಮ ಪುಷ್ಠಿ ನೀಡುವಂತಿದೆ.

ಕೊರೊನಾ ಓಡಿಸಲು ತುಳಸಿ, ಬೇವಿನೆಲೆ ಮಾಸ್ಕ್‌ ಧರಿಸಿದ ಸಾಧು

ಬಿಜೆಪಿ ಶಾಸಕ ಅಭಯ್ ಪಾಟೀಲ್ ಬೆಳಗಾವಿ ಜಿಲ್ಲೆಯ ಶಿವಾಜಿ ಗಾರ್ಡನ್ ಸುತ್ತ ಬರೋಬ್ಬರಿ 50 ಕಡೆಗಳಲ್ಲಿ ಹೋಮ ಮಾಡಿಸಿದ್ದಾರೆ. ವಾತಾವರಣ ಶುದ್ಧಿಯಾಗಲಿ ಹಾಗೂ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಗಲ್ಲಿ ಗಲ್ಲಿಗಳಲ್ಲಿ, ರಸ್ತೆ ರಸ್ತೆಗಳಲ್ಲಿ ಹೋಮ ಮಾಡಲಾಗಿದೆ. ಅಗ್ನಿಕುಂಡವನ್ನು ಟ್ರಾಲಿಯಲ್ಲಿ ಎಳೆದೊಯ್ಯುತ್ತಾ ಓಣಿ ಓಣಿಗಳಲ್ಲಿ ಅಗ್ನಿ ಕುಂಡದಲ್ಲಿ ಧೂಪ, ಲವಂಗ, ಬೇವಿನ ಎಲೆ, ತುಪ್ಪ, ಬೆರಣಿ, ಕರ್ಪೂರ, ಕವಡಿ, ಗುಗ್ಗಳ, ಅಕ್ಕಿಯನ್ನು ಜನರಿಂದ ಹಾಕಿಸಲಾಗಿದೆ.

ಫ್ರೆಂಚ್‌ ಉದ್ಯಮಿ ಈಗ ಜಗತ್ತಿನ ಅತಿ ʼಸಿರಿವಂತʼ

ರಸ್ತೆ ಬದಿಯಲ್ಲೂ ಹಲವು ಹೋಮಗಳನ್ನು ಮಾಡಿಸಿದ್ದು, ನೂರಾರು ಜನರು ಹೋಮಕ್ಕೆ ಬೇವಿನ ಎಲೆ, ಧೂಪ, ಕರ್ಪೂರ ಮೊದಲಾದವುಗಳನ್ನು ತಂದು ಸಮರ್ಪಿಸಿದ್ದಾರೆ. ಈ ಮೂಲಕ ಲಾಕ್ ಡೌನ್ ನಿಯಮವನ್ನು ಸ್ವತಃ ಜನಪ್ರತಿನಿಧಿಯೇ ಉಲ್ಲಂಘನೇ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಅಭಯ್ ಪಾಟೀಲ್, ನಾವು ಆಸ್ಪತ್ರೆ ಸುತ್ತಮುತ್ತ ಹೋಮ ಮಾಡಿಲ್ಲ. ಮನೆಗಳ ಸುತ್ತಮುತ್ತ ರಸ್ತೆಗಳಲ್ಲಿ ಮಾಡಲಾಗಿದೆ. ಸಕಾರಾತ್ಮಕ ಭಾವನೆಯಿಂದ ಹಾಗೂ ವಾತಾವರಣ ಶುದ್ಧಿಗಾಗಿ, ಆಯುರ್ವೇದ ಪಂಡಿತರನ್ನು ಹಿರಿಯರನ್ನು ಕೇಳಿ ಈ ಒಂದು ಪ್ರಯೋಗ ಮಾಡಿದ್ದೇವೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...