ಕೊರೊನಾ ಸಾಂಕ್ರಾಮಿಕದ ಮಧ್ಯೆ ದೇಶದ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ವಿವಾಹ ಸಮಾರಂಭಗಳಲ್ಲಿ ಜನರನ್ನು ಸೀಮಿತಗೊಳಿಸಲಾಗಿದೆ. ಈ ಮಧ್ಯೆ ವಿಶಿಷ್ಟ ಮದುವೆಯೊಂದು ನಡೆದಿದೆ. ಜೋಡಿಯೊಂದು ವಿಮಾನದಲ್ಲಿ ಮದುವೆಯಾಗಿದ್ದಾರೆ.
ಕೊರೊನಾಗೆ ಬಲಿಯಾದ 8 ತಿಂಗಳ ಗರ್ಭಿಣಿ; ಶಿಶುವನ್ನು ರಕ್ಷಿಸಿದ ವೈದ್ಯರು
ವಿಮಾನವು ಮಧುರೈನಿಂದ ತೂತುಕುಡಿಗೆ ಎರಡು ಗಂಟೆಗಳ ಕಾಲ ಪ್ರಯಾಣ ನಡೆಸಿತು. ವಧು-ವರರ ಜೊತೆಗೆ ಕುಟುಂಬ ಮತ್ತು ಆಪ್ತರು ಸೇರಿದಂತೆ ಸುಮಾರು 160 ಜನರು ವಿಮಾನದಲ್ಲಿ ನಡೆದ ಮದುವೆಯಲ್ಲಿ ಭಾಗಿಯಾಗಿದ್ದರು. ಮೀನಾಕ್ಷಿ ದೇವಾಲಯದ ಮೇಲೆ ಹಾರುವ ಸಂದರ್ಭದಲ್ಲಿ ಮದುವೆ ನಡೆಯಿತು. ಈ ವಿವಾಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಯಾರೂ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಈ ಮದುವೆ ಬಗ್ಗೆ ಜನರು ವಿವಿಧ ರೀತಿಯ ಪ್ರತಿಕ್ರಿಯೆ ನೀಡ್ತಿದ್ದಾರೆ.
ಕೊರೋನಾ ವೈರಸ್ ಸ್ವಾಭಾವಿಕವಲ್ಲವೆಂದು ಬಹುದೊಡ್ಡ ಅನುಮಾನ, ಚೀನಾದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ; ಆಂಥೋನಿ ಫೌಸಿ
ವರದಿಯ ಪ್ರಕಾರ, ಖಾಸಗಿ ವಿಮಾನಯಾನ ಸಂಸ್ಥೆ ಈ ಚಾರ್ಟರ್ಡ್ ಸೇವೆಗೆ ಅನುಮತಿ ನೀಡಿದೆ. ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮೋದನೆ ನೀಡಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಸೆಂಥಿಲ್ ವಲವಾನ್ ಹೇಳಿದ್ದಾರೆ. ಆದರೆ ವಿಮಾನದಲ್ಲಿ ಮದುವೆಯಾಗಲು ಯಾವುದೇ ಅನುಮತಿ ಪಡೆದಿಲ್ಲ. ಇದು ಕೊರೊನಾ ಶಿಷ್ಟಾಚಾರದ ನೇರ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.