ಆಫ್ರಿಕಾದ ಉತ್ತರ ಭಾಗದಲ್ಲಿರುವ ದೇಶಗಳಲ್ಲಿ ಬಡತನದ ಬೇಗೆ ಅನುಭವಿಸದೇ ಮೆಡಿಟರೇನಿಯನ್ ಸಮುದ್ರ ದಾಟಿಕೊಂಡು ಯೂರೋಪ್‌ಗೆ ದಿನಂಪ್ರತಿ ನೂರಾರು ಮಂದಿ ವಲಸೆ ಹೋಗುತ್ತಾರೆ.
ಇಂಥದ್ದೇ ನಿದರ್ಶನದಲ್ಲಿ; ಮೊರಕ್ಕೋದ ಟೀನೇಜರ್ ಒಬ್ಬ ಪ್ಲಾಸ್ಟಿಕ್ ಬಾಟಲಿಗಳನ್ನು ಹೊಟ್ಟೆಗೆ ಕಟ್ಟಿಕೊಂಡು ಸ್ಪೇನ್ ಗಡಿಯತ್ತ ಈಜಿಕೊಂಡು ಹೋಗುತ್ತಿರುವ ಚಿತ್ರವೊಂದು ನೆಟ್ಟಿಗರ ಮನ ಕಲಕಿದೆ. ಕಪ್ಪು ಬಣ್ಣದ ಟೀ-ಶರ್ಟ್ ಧರಿಸಿರುವ ಈ ಹುಡುಗ ಸ್ಪೇನ್ ಗಡಿ ಬಳಿಕ ಕ್ಯೂಯೆಟಾ ತಲುಪಿದ ಕೂಡಲೇ ಭದ್ರತಾ ಸಿಬ್ಬಂದಿಯ ಕೈಗೆ ಸಿಕ್ಕಿದ್ದಾನೆ.
ಗಜಪಡೆಯ ಬೆಳಗಿನ ವಾಕಿಂಗ್: ವಿಡಿಯೋ ವೈರಲ್
ತನ್ನನ್ನು ಮರಳಿ ಕಳುಹಿಸದಂತೆ ಪರಿಪರಿಯಾಗಿ ಬೇಡಿಕೊಂಡ ಹುಡುಗ, “ಮರಳಿ ಹೋಗುವುದಕ್ಕಿಂತ ನಾನು ಸಾಯಲು ಇಚ್ಛಿಸುತ್ತೇನೆ” ಎನ್ನುವ ಈತ ತನ್ನ ಬಳಿ ಕಣ್ಣೀರಿಟ್ಟಿದ್ದಾಗಿ ಮೊರಾಕ್ಕೋದ ಸೈನಿಕ ರಾಚಿದ್ ಮೊಹಮ್ಮದ್ ಅಲ್ ಮೆಸ್ಸೋಯಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.