ದೇಶಾದ್ಯಂತ ಕೋವಿಡ್ ಎರಡನೇ ಅಲೆ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದರೆ, ಕೆಲವೊಂದು ರಾಜ್ಯಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದೇ ವೇಳೆ ಅಗತ್ಯವಿರುವ ಮಂದಿಗೆ ಸಹಾಯ ಮಾಡಲು ಸಜ್ಜನರು ಮುಂದಾಗುತ್ತಿರುವ ಅನೇಕ ನಿದರ್ಶನಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕೋವಿಳ್‌ಪಟ್ಟಿ ಪಟ್ಟಣದಲ್ಲಿ ಬಾಳೆಹಣ್ಣಿನ ವ್ಯಾಪಾರಿಯಾಗಿರುವ ಮುತ್ತುಪಾಂಡಿ ಇಂಥ ಪರೋಪಕಾರಿಗಳಲ್ಲಿ ಒಬ್ಬರು. ಕಳೆದ ಎರಡು ವರ್ಷಗಳಿಂದ ತಮ್ಮ ಅಂಗಡಿ ನಡೆಸಿಕೊಂಡು ಹೋಗುತ್ತಿರುವ ಮುತ್ತುಪಾಂಡಿ, ಹಸಿದ ಮಂದಿಗೆ ಬಾಳೆಹಣ್ಣುಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.
ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಇವತ್ತೂ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ
ಪ್ರತಿನಿತ್ಯ ತಮ್ಮ ಅಂಗಡಿ ಬಾಗಿಲು ಹಾಕುವ ಮುನ್ನ ಅಂಗಡಿ ಮುಂದೆ ಬಾಳೆಹಣ್ಣುಗಳ ಗೊನೆಗಳನ್ನು ನೇತು ಹಾಕಿ ಹಸಿದವರು ಹಣ್ಣುಗಳನ್ನು ತೆಗೆದುಕೊಂಡು ತಿನ್ನಲು ಬಿಡುತ್ತಾರೆ ಮುತ್ತುಪಾಂಡಿಯನ್.
ಕೊರೋನಾ ಸಂಕಷ್ಟದಿಂದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡ್ತಿರುವ ಪುಟ್ಬಾಲ್ ಆಟಗಾರ್ತಿಗೆ ಕ್ರೀಡಾ ಸಚಿವ ಕಿರಣ್ ರಿಜಿಜು ನೆರವು
“ನಿಮಗೆ ಹಸಿವಾಗಿದ್ದರೆ ತೆಗೆದುಕೊಂಡು ತಿನ್ನಿ. ಹಣ್ಣುಗಳು ಉಚಿತ. ಆದರೆ ವ್ಯರ್ಥ ಮಾಡಬೇಡಿ” ಎಂದು ಅಂಗಡಿ ಮುಂದೆ ಸ್ಲೇಟ್ ಒಂದರಲ್ಲಿ ತಮಿಳಿನಲ್ಲಿ ಬರೆದಿದ್ದಾರೆ ಮುತ್ತುಪಾಂಡಿಯನ್.
ಬಸ್ಸುಗಳು ಸಿಗದೇ ಈ ಊರಿನಲ್ಲಿ ಸಿಲುಕಿದ ಪ್ರಯಾಣಿಕರು, ವೃದ್ಧರು, ದಾರಿಹೋಕರು, ಕೋವಿಡ್-19 ಪೀಡಿತರ ಸಂಬಂಧಿಕರಿಗೆ ಮುತ್ತುಪಾಂಡಿಯನ್‌ರ ಈ ಧಾರಾಳತನದಿಂದ ಅನುಕೂಲವಾಗುತ್ತಿದೆ.