ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದ ತೌಕ್ತೆ ಚಂಡಮಾರುತ ಗಜರಾತ್ ರಾಜ್ಯದಲ್ಲೂ ಭಾರೀ ಅವಾಂತರ ಸೃಷ್ಟಿಸಿದೆ. ರಾಜ್ಯದ ಗಿರ್ ಸಿಂಹ ಧಾಮದಲ್ಲೂ ಸಹ ಚಂಡಮಾರುತದ ಪರಿಣಾಮ ಉಂಟಾಗಿದೆ.
ಏಷ್ಯಾಟಿಕ್ ಸಿಂಹಗಳ ಹಿಂಡೊಂದು ನೀರು ತುಂಬಿಕೊಂಡ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋ ಗಿರ್ನಲ್ಲಿ ಸೆರೆ ಹಿಡಿಯಲಾಗಿದೆ ಎನ್ನಲಾಗಿತ್ತು. ಈ ಕ್ಲಿಪ್ ಶೇರ್ ಮಾಡಿಕೊಂಡ ಮಂದಿಯ ಪೈಕಿ ಗುಜರಾತ್ನ ಅರಣ್ಯ ಹಾಗೂ ಪರ್ಯಾವರಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ ರಾಜೀವ್ ಕುಮಾರ್ ಸಹ ಇದ್ದಾರೆ.
‘ಯಾಸ್’ ಚಂಡಮಾರುತ ಅಬ್ಬರ: ರಾಜ್ಯದಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ
ಆದರೆ ಈ ವಿಡಿಯೋವನ್ನು ದಕ್ಷಿಣ ಆಫ್ರಿಕಾದ ಮಾಲಾ ಮಾಲಾ ವನ್ಯಧಾಮದಲ್ಲಿ ರೆಕಾರ್ಡ್ ಮಾಡಲಾಗಿದೆ. ಈ ವನ್ಯಧಾಮದ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿತ್ತು.
ವಿಚಾರ ಅರಿತುಕೊಂಡ ಗುಪ್ತಾ, ಮೇ 22ರ ಬೆಳಿಗ್ಗೆ ಈ ವಿಡಿಯೋವನ್ನು ಹಿಂಪಡೆದುಕೊಂಡು, ಸ್ಪಷ್ಟನೆಯನ್ನೂ ಸಹ ನೀಡಿದ್ದರು.
https://www.instagram.com/p/CLOOT1MnNxn/?utm_source=ig_web_copy_link