ಹೈದರಾಬಾದ್: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೈದ್ಯರೊಬ್ಬರು ಕೊರೊನಾ ಸೋಂಕಿಗೆ ಆಯುರ್ವೇದ ಔಷಧವನ್ನು ಕಂಡುಹಿಡಿದಿದ್ದು, ಔಷಧಕ್ಕಾಗಿ ಜನರು ನಾ ಮುಂದು ತಾ ಮುಂದು ಎಂದು ವೈದ್ಯನ ಮನೆ ಮುಂದೆ ಮುಗಿಬಿದ್ದ ಘಟನೆ ನಡೆದಿದೆ.
ನೆಲ್ಲೂರಿನ ಕೃಷ್ಣಪಟ್ಟಣಂನ ಆಯುರ್ವೇದ ವೈದ್ಯ ಆನಂದಯ್ಯ ಎಂಬುವವರು ಕೊರೊನಾ ಸೋಂಕಿಗೆ ರಾಮಬಾಣ ಎಂಬಂತೆ ಔಷಧವನ್ನು ಕಂಡು ಹಿಡಿದಿದ್ದು, ಸೋಂಕಿತರ ಚಿಕಿತ್ಸೆಗಾಗಿ ಈ ಔಷಧ ನೀಡುತ್ತಿದ್ದಾರೆ. ಔಷಧಿಗಾಗಿ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಸ್ಥಳದಲ್ಲಿ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಜನರು ಕಿಲೋಮೀಟರ್ ಗಟ್ಟಲೇ ಉದ್ದ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಡ ಮಕ್ಕಳ ಹಸಿವು ನೀಗಿಸಿದ ಪೊಲೀಸ್ ಪೇದೆ: ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ
ಈ ನಡುವೆ ಆನಂದಯ್ಯ ಆಯುರ್ವೆದಿಕ್ ಮೆಡಿಸಿನ್ ಬಗ್ಗೆ ಅಧ್ಯಯನ ನಡೆಸಲು ಈ ಔಷಧವನ್ನು ಐಸಿಎಂಆರ್ ಕಳುಹಿಸಲು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.