ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ದೇಶೀ ಕಂಪನಿ ನೆಕ್ಸ್‌ಝು ಮೊಬಿಲಿಟಿ ’ರೋಡ್‌ಲಾರ್ಕ್’ನ ಸರಕು ಸಾಗಾಟದ ಅವತರಣಿಕೆಯನ್ನು ಬಿಡುಗಡೆ ಮಾಡಿದ್ದು, ಇದರ ಆರಂಭಿಕ ಬೆಲೆ 42,000 ರೂ. ಗಳಷ್ಟಿದೆ.
ದೇಶಾದ್ಯಂತ ವ್ಯಾಪಕವಾಗಿರುವ ಇ-ಕಾಮರ್ಸ್‌ನ ಡೆಲಿವರಿ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ರೋಡ್‌ಲಾರ್ಕ್ ಕಾರ್ಗೋ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ರೆಸ್ಟೋರೆಂಟ್ ಗಳು, ಸೂಪರ್ ಮಾರ್ಕೆಟ್‌ಗಳು, ರಿಟೇಲ್ ಅಂಗಡಿಗಳು, ಕೈಗಾರಿಕಾ ಪಾರ್ಕ್‌ಗಳು, ಅಗತ್ಯ ವಸ್ತುಗಳ ಪೂರೈಕೆದಾರರು, ಸರ್ವೀಸ್ ಹಾಗೂ ನಿರ್ವಹಣೆದಾರ ಕಂಪನಿಗಳು, ಗ್ಯಾರೇಜ್‌ಗಳಂಥ ಜಾಗಗಳಲ್ಲಿ ರೋಡ್‌ಲಾರ್ಕ್ ಬಹಳ ಉಪಯೋಗಕ್ಕೆ ಬರಲಿದೆ ಎನ್ನಲಾಗಿದೆ.
ಮಕ್ಕಳಿಗೆ ಲಸಿಕೆ ಬಗ್ಗೆ ಗುಡ್ ನ್ಯೂಸ್: ಸುರಕ್ಷಿತ, ಪರಿಣಾಮಕಾರಿಯಾಗಿದೆ ಈ ಲಸಿಕೆ –ತಜ್ಞರ ಶಿಫಾರಸು
ಅವಳಿ ಡಿಸ್ಕ್ ಬ್ರೇಕ್‌ಗಳು, ಅವಳಿ ಬ್ಯಾಟರಿ ಹಾಗೂ ಸುಲಭವಾಗಿ ಚಾರ್ಜ್ ಮಾಡಿಕೊಳ್ಳುವ ಸೌಲಭ್ಯವಿರುವ ಈ ರೋಡ್‌ಲಾರ್ಕ್ ಕಾರ್ಗೋ ಬಳಕೆಯ ಮೂಲಕ ಡೆಲಿವರಿ ವೆಚ್ಚದಲ್ಲಿ 95% ಉಳಿತಾಯ ಮಾಡಬಹುದಲ್ಲದೇ ಸವಾರರಿಗೆ ಉತ್ಕೃಷ್ಟ ಸುರಕ್ಷತೆಯನ್ನು ಸಹ ಖಾತ್ರಿ ಪಡಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ. 50 ಕೆಜಿಯಷ್ಟು ತೂಕ ಹೊತ್ತು ಸಾಗಬಲ್ಲ ರೋಡ್‌ಲಾರ್ಕ್ ಕಾರ್ಗೋ, ಗರಿಷ್ಠ 25ಕಿಮೀ/ಗಂಟೆ ವೇಗದಲ್ಲಿ ಚಲಿಸಬಲ್ಲದಾಗಿದೆ.