ಅಗತ್ಯವೇ ಆವಿಷ್ಕಾರದ ತಾಯಿ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಬರುತ್ತಿರುವ ಮಾತಾಗಿದೆ. ಕೋವಿಡ್-19 ಸಾಂಕ್ರಮಿಕದ ನಡುವೆ ಈ ಮಾತು ಇನ್ನಷ್ಟು ಪ್ರಸ್ತುತ ಎನಿಸಿಬಿಟ್ಟಿದೆ.
ಕೋವಿಡ್ ವೈರಾಣುಗಳಿಂದ ನಿಮ್ಮನ್ನು ನೀವು ಸುರಕ್ಷಿತವಾಗಿಟ್ಟುಕೊಳ್ಳಲು ಸಾಮಾಜಿಕ ಅಂತರ, ಮಾಸ್ಕ್, ಲಸಿಕೆಗಳಿಗೆ ಸಾಕಷ್ಟು ಒತ್ತು ಕೊಟ್ಟೇ ಇರುತ್ತೀರಿ. ಇಷ್ಟೆಲ್ಲಾ ಮಾಡಿದರೂ ಸಹ ನಿಮಗೆ ಕೊರೋನಾ ವೈರಸ್ ಬಾಧಿಸುವುದಿಲ್ಲ ಎಂದು ಹೇಳಲಾಗದು.
ಮೃತ ಕೊರೊನಾ ಸೋಂಕಿತರ ಹಣವನ್ನೂ ಬಿಡಲಿಲ್ಲ ಖದೀಮರು
ಈ ಭಯದಿಂದಲೇ ಜಗತ್ತಿನಾದ್ಯಂತ ಜನರು ತಮ್ಮನ್ನು ತಾವು ಸಾಂಕ್ರಮಿಕದಿಂದ ರಕ್ಷಿಸಿಕೊಳ್ಳಲು ಚಿತ್ರವಿಚಿತ್ರ ಐಡಿಯಾಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅನೇಕ ದೇಶಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಮರುಚಾಲನೆ ಕಾಣುತ್ತಿರುವ ನಡುವೆ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಹೊಸ ಹೊಸ ಜುಗಾಡ್ಗಳನ್ನು ಕಂಡುಕೊಳ್ಳುತ್ತಿದ್ದಾರೆ.
ಇಲ್ಲೊಬ್ಬ ಭೂಪ ಈ ವಿಚಾರದಲ್ಲಿ ಎಲ್ಲರಿಗಿಂತ ಭಿನ್ನವಾದ ಹೆಜ್ಜೆ ಇಟ್ಟು, ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವ ವೇಳೆ ತನ್ನನ್ನು ಸಾಮಾಜಿಕವಾಗಿ ಅಂತರದಲ್ಲಿ ಇಟ್ಟುಕೊಳ್ಳಲೆಂದು ಬಯೋ-ಬಬಲ್ ಒಂದನ್ನು ಸೃಷ್ಟಿಸಿಕೊಂಡಿದ್ದಾನೆ. ಈತನ ಈ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗಿದೆ.