alex Certify ʼಮಾಸ್ಕ್​ ಟು ಮಾಸ್ಕ್ʼ​ ಚುಂಬನ ಎಷ್ಟು ಸುರಕ್ಷಿತ….? ಇಲ್ಲಿದೆ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾಸ್ಕ್​ ಟು ಮಾಸ್ಕ್ʼ​ ಚುಂಬನ ಎಷ್ಟು ಸುರಕ್ಷಿತ….? ಇಲ್ಲಿದೆ ಒಂದಷ್ಟು ಮಾಹಿತಿ

ಮಾಸ್ಕ್​ ಧರಿಸಿಯೇ ಕಿಸ್​ ಮಾಡೋದು – ಸದ್ಯ ಚಾಲ್ತಿಯಲ್ಲಿರುವ ಟ್ರೆಂಡ್​ಗಳಲ್ಲಿ ಒಂದಾಗಿದೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ ಹಾಗೂ ಅವರ ಪತಿ ಮಾಸ್ಕ್​ ಧರಿಸಿಯೇ ಚುಂಬನ ಮಾಡಿಕೊಂಡಿದ್ದ ದೃಶ್ಯ ವೈರಲ್​ ಆಗಿತ್ತು. ಅದೇ ರೀತಿ ನಟ ವರುಣ್​ ಸೂದ್​ ತನ್ನ ಗರ್ಲ್​ಫ್ರೆಂಡ್​ ದಿವ್ಯಾ ಅಗರ್ವಾಲ್​​​ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಮಾಸ್ಕ್​​ ಧರಿಸಿಯೇ ಮುತ್ತನ್ನಿಟ್ಟ ದೃಶ್ಯ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

ಆದರೆ ಇದೀಗ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ ಏನೆಂದರೆ – ಈ ರೀತಿ ಮಾಸ್ಕ್​ ಧರಿಸಿ ಕಿಸ್​ ಮಾಡೋದು ಎಷ್ಟು ಸೇಫ್​..? ಅನ್ನೋದಾಗಿದೆ. ವಿಶ್ವದಲ್ಲಿ ಕೊರೊನಾ ವಿರುದ್ಧ ಲಸಿಕೆ ಅಭಿಯಾನವೇನೋ ನಡೆಯುತ್ತಿದೆ. ಆದರೆ ಇನ್ನೂ ಎಲ್ಲರೂ ಲಸಿಕೆಯನ್ನ ಪಡೆದಿಲ್ಲ. ಕೊರೊನಾಗೆ ಇನ್ನೂ ಶಾಶ್ವತ ಪರಿಹಾರ ಸಿಗದ ಈ ಸಂದರ್ಭದಲ್ಲಿ ಈ ರೀತಿ ಮಾಸ್ಕ್​ ಕಿಸ್​ ಎಷ್ಟು ಸುರಕ್ಷಿತ ಅನ್ನೋದರ ಬಗ್ಗೆ ಡಾ. ಅನುಭಾ ಸಿಂಗ್​ ಮಾಹಿತಿ ನೀಡಿದ್ದಾರೆ.

ಮಾಸ್ಕ್​ ಧರಿಸಿದರೆ ಕೋವಿಡ್​ 19ನಿಂದ ಬಚಾವಾಗಬಹುದಾಗಿದೆ. ಇದು ದೇಹಕ್ಕೆ ಪ್ರವೇಶಿಸುವ ವೈರಾಣುಗಳನ್ನ ತಡೆಗಟ್ಟುವ ಸಾಮರ್ಥ್ಯ ಹೊಂದಿರೋದ್ರಿಂದ ಈ ಸಮಯದಲ್ಲಿ ಮಾಸ್ಕ್​ ಧರಿಸಲೇಬೇಕಿದೆ. ಹಾಗಂತ ಮಾಸ್ಕ್​ ಧರಿಸಿದ ಮಾತ್ರಕ್ಕೆ ಕಾಯಿಲೆಯ ಅಪಾಯವಿಲ್ಲ ಅನ್ನೋದು ಎಲ್ಲಿಯೂ ಸಾಬೀತಾಗಿಲ್ಲ ಎಂದು ಅನುಭಾ ಹೇಳಿದ್ದಾರೆ.

ಮಾಸ್ಕ್​ಗಳು ಒಂದು ರೀತಿ ಕಾಂಡೋಮ್​ಗಳಂತೆ. ನೀವು ಸರಿಯಾದ ರೀತಿಯಲ್ಲಿ ಇದನ್ನ ಬಳಕೆ ಮಾಡಿದ್ರೆ ನಿಮಗೆ 100 ಪ್ರತಿಶತ ಸುರಕ್ಷತೆ ಸಿಗಲಿದೆ. ಹೀಗಾಗಿ ಮಾಸ್ಕ್​ ಹಾಕಿ ಕಿಸ್​ ಮಾಡುವ ವೇಳೆಯೂ ತುಂಬಾನೇ ಎಚ್ಚರದಿಂದಿರೋದು ಅಗತ್ಯ. ಮಾಸ್ಕ್​ಗಳನ್ನ ಬಿಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಚುಂಬಿಸೋದ್ರಿಂದ ಕೋವಿಡ್​ ಅಪಾಯವಿದೆ ಎಂದು ಹೇಳಿದ್ರು.

ನಾವು ಧರಿಸುವ ಮಾಸ್ಕ್​ನ ಮೇಲ್ಮೈ ಮೇಲೆ ವೈರಾಣುಗಳು ಅಂಟಿಕೊಂಡಿರುತ್ತವೆ. ಹೀಗಾಗಿ ಇನ್ನೊಬ್ಬರ ಮಾಸ್ಕ್​ನ್ನು ಹತ್ತಿರದಿಂದ ಸಂಪರ್ಕಿಸೋದು ಬಹಳ ಗಂಭೀರ ಪರಿಣಾಮಕ್ಕೆ ನಾಂದಿ ಹಾಡಬಹುದು. ಹೀಗಾಗಿ ಮಾಸ್ಕ್​ ಕಿಸ್​ನ್ನು ಬಿಡೋದೇ ಒಳ್ಳೆಯದು ಎಂದು ವೈದ್ಯೆ ಶೋಭಾ ಗುಪ್ತಾ ಸಲಹೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...