ಕೋವಿಡ್-19 ಸಾಂಕ್ರಮಿಕದ ಎರಡನೇ ಅಲೆ ಭಾರೀ ಭೀತಿ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಸಾಮಾಜಿಕ ಅಂತರದ್ದೇ ಮಾತು ಎಂಬಂತೆ ಆಗಿಬಿಟ್ಟಿದೆ.
ಇಂದೋರ್‌ನ ಎಳನೀರು ವ್ಯಾಪಾರಿಯೊಬ್ಬರು ಸಾಮಾಜಿಕ ಅಂತರವನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ತಮ್ಮ ವಿಶೇಷ ಸಿಸ್ಟಮ್ ಒಂದರ ಮೂಲಕ ಬುಂಡೆಗಳನ್ನು ಚಚ್ಚಿ ತಾಜಾ ಎಳನೀರನ್ನು ಫಿಲ್ಟರ್ ಮಾಡಿ ಕೊಡುವುದಲ್ಲದೇ, ಅವುಗಳನ್ನು ಸೀಳಿ ಗಂಜಿಯನ್ನೂ ಸಹ ಅಚ್ಚುಕಟ್ಟಾಗಿ ತೆಗೆದುಕೊಡುವ ವಿಡಿಯೋವೊಂದು ವೈರಲ್ ಆಗಿದೆ.
ಅದೃಷ್ಟ ಅಂದರೆ ಇದು..! ಕಾರಿನ ಮೇಲೆ ದೈತ್ಯ ಮರ ಬಿದ್ದರೂ ಕೂದಲೆಳೆಯಲ್ಲಿ ಪಾರಾದ ಚಾಲಕ
ಇವೆಲ್ಲಾ ಆದ ಬಳಿಕ ತಮ್ಮ ಗ್ರಾಹಕರಿಗೆ ಪ್ಲಾಸ್ಟಿಕ್ ಲೋಟಗಳಲ್ಲಿ ಎಳನೀರು ಹಾಗೂ ಗಂಜಿಯನ್ನು ವಿತರಿಸುತ್ತಿರುವ ಈ ವರ್ತಕನ ವಿಡಿಯೋನ್ನು ಅದಾಗಲೇ 43 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ.
https://www.youtube.com/watch?v=qOv4YA6kxGU