ತೌಕ್ತೆ ಚಂಡಮಾರುತದ ಹಾವಳಿಯ ಪರಿಯನ್ನು ತೋರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮುಂಬಯಿಯ ಒಬೆರಾಯ್ ಟ್ರೈಡೆಂಟ್ ಹೊಟೇಲ್ ಬಳಿ ಕಟ್ಟಡದ ಭಾಗವೊಂದು ಪಾರ್ಕಿಂಗ್ ಲಾಟ್ ಮೇಲೆ ಕುಸಿಯುತ್ತಿದೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಮಾಯಾನಗರಿಯ ನಾರಿಮನ್ ಪಾಯಿಂಟ್‌ನಲ್ಲಿರುವ ಈ ಹೊಟೇಲ್‌ನ ಟ್ರೈಡೆಂಟ್ ವಿಂಗ್‌ಗೆ ಹಾನಿಯಾಗಿದೆ ಎನ್ನಲಾಗಿದ್ದು ಗಂಟೆಗೆ ಸುಮಾರು 90 ಕಿಮೀ ವೇಗದಲ್ಲಿ ಬೀಸುತ್ತಿದ್ದ ಬಿರುಗಾಳಿ ಹಾಗೂ ಮಳೆಯ ಕಾರಣ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಹೇಳಲಾಗಿತ್ತು.
ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಎಲ್ಲರಿಗೂ ವ್ಯಾಕ್ಸಿನ್ ನೀಡಲು ಪ್ಲಾನ್
ಆದರೆ ಈ ವಿಡಿಯೋ ಬಗ್ಗೆ ಹೇಳಲಾದ ಮಾತುಗಳ ಸತ್ಯಾಸತ್ಯತೆಯ ಪರಿಶೀಲನೆ ಮಾಡಿದ ’ದಿಪ್ರಿಂಟ್’, ಈ ವಿಡಿಯೋವನ್ನು ಮಧ್ಯಪೂರ್ವದಲ್ಲಿ ಸೆರೆ ಹಿಡಿಯಲಾಗಿದೆ ಎಂದಿದೆ. ಇಂಥ ಯಾವುದೇ ಹಾನಿಯು ಟ್ರೈಡೆಂಟ್ ಹೊಟೇಲ್ ಬಳಿ ಸಂಭವಿಸಿಲ್ಲ ಎಂದು ಆಲ್ ಇಂಡಿಯಾ ರೇಡಿಯೋದ ಮುಂಬಯಿ ವಿಭಾಗ ಸುದ್ದಿ ಮಾಡಿದೆ.
https://twitter.com/equitysoul/status/1394194612831457281?ref_src=twsrc%5Etfw%7Ctwcamp%5Etweetembed%7Ctwterm%5E1394194612831457281%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fviral-video-of-mumbais-trident-hotel-collapsing-in-cyclone-tauktae-turns-out-to-be-from-saudi-arabia-3747221.html