ಬೆಂಗಳೂರು: ಕೊರೊನಾ ಸೋಂಕಿನ ಬಗ್ಗೆ ಬೇಜವಾಬ್ದಾರಿ ತೋರಿದಂತೆಯೇ ಹೊಸ ಮಾದರಿ ಬ್ಲ್ಯಾಕ್ ಫಂಗಸ್ ಸೋಂಕಿನ ಬಗ್ಗೆಯೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಬ್ಲ್ಯಾಕ್ ಫಂಗಸ್ ಬಗ್ಗೆ ಆತಂಕ ಬೇಡ ಎಂದು ಹೇಳುತ್ತಿರುವ ಆರೋಗ್ಯ ಸಚಿವ ಸುಧಾಕರ್ ಡಾಕ್ಟರ್ ಇರಬಹುದೇನೋ ಆದರೆ ತಜ್ಞರಲ್ಲ. ನಿರ್ಲಕ್ಷ್ಯ ಬಿಟ್ಟು ಶುರುವಿನಲ್ಲಿಯೇ ಸೋಂಕನ್ನು ನಿಯಂತ್ರಿಸಲು ತಕ್ಷಣ ತಜ್ಞರ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ.
ಕೊರೊನಾ ಸೋಂಕಿತರಿಗೆ ನಿರ್ಣಾಯಕ 5 ರಿಂದ 10 ದಿನ – ಇದರ ಹಿಂದಿದೆ ಬಹುಮುಖ್ಯ ಕಾರಣ
ಕಾಳದಂಧೆಕೋರರು ಶಿಲೀಂದ್ರ ನಿರೋಧಕ ಔಷಧಗಳಿಗೆ ಕೃತಕ ಅಭಾವ ಸೃಷ್ಟಿಸಿದ್ದಾರೆ. ಈವರೆಗೂ ಔಷಧಗಳ ಕಾಳಸಂತೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವೂ ಆಗಿಲ್ಲ, ಈ ಬಗ್ಗೆ ಚಿಂತನೆಯನ್ನೂ ನಡೆಸಿಲ್ಲ ಎಂದು ವಾಗ್ದಾಳಿ ನಡೆಸಿದೆ.