ಒಳ್ಳೆಯ ಮೊತ್ತದ ವಿದ್ಯಾರ್ಥಿ ವೇತನವನ್ನ ಪಡೆಯಬೇಕು ಅನ್ನೋ ಆಸೆ ಎಲ್ಲರಿಗಿರುತ್ತದೆ. ಆದರೆ ಈ ಕನಸು ಎಲ್ಲಾ ವಿದ್ಯಾರ್ಥಿಗಳಿಂದ ಸಾಕಾರ ಮಾಡಿಕೊಳ್ಳಲು ಸಾಧ್ಯವಾಗೋದಿಲ್ಲ. ಈ ಕನಸು ನನಸಾಗಬೇಕು ಅಂದರೆ ಸರಿಯಾದ ಯೋಜನೆ ಹಾಗೂ ಪರಿಶ್ರಮದ ಅಗತ್ಯವಿದೆ.
ಇಷ್ಟೆಲ್ಲ ಪ್ರಯತ್ನಪಟ್ಟ ಬಳಿಕ ವಿದ್ಯಾರ್ಥಿವೇತನ ಸಿಕ್ಕರೂ ಸಹ ಕೆಲವರಿಗೆ ಅದು ಅವರ ನಿರೀಕ್ಷೆಯ ಮಟ್ಟ ತಲುಪದ ಕಾರಣ ತೃಪ್ತಿ ಎನಿಸೋದಿಲ್ಲ.
ಆದರೆ ಡೆನಿಶಾ ಹಾಗೂ ಡೆಸ್ಟಿನಿ ಎಂಬ ಅವಳಿ ಸಹೋದರಿಯರು ಈ ಮಾತನ್ನ ಸುಳ್ಳು ಮಾಡಿದ್ದಾರೆ. ಇವರಿಬ್ಬರೂ ತರಗತಿಯಲ್ಲಿ ಮೊದಲ ಅಂಕ ಪಡೆಯುವ ಮೂಲಕ 24 ಮಿಲಿಯನ್ ಡಾಲರ್ಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನ ಪಡೆದಿದ್ದಾರೆ.
ಅಮೆರಿಕದ ಲೂಸಿಯಾನದ ಪ್ರೌಢಶಾಲೆಯಲ್ಲಿ ಈ ಅವಳಿ ಸಹೋದರಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ಇಬ್ಬರು ಸಹೋದರಿಯರು ಓದೋದ್ರಲ್ಲಿ ತುಂಬಾನೇ ಜಾಣೆಯರು. ಇದರ ಜೊತೆಯಲ್ಲಿ ಇವರು ಸಾಂಸ್ಕೃತಿಕ ಚಟುವಟಿಕೆ ಹಾಗೂ ಎಮೆರ್ಜೆನ್ಸಿ ಮೆಡಿಸಿನ್ ಪ್ರೋಗ್ರಾಂನಲ್ಲೂ ಚಾಕಚಕ್ಯತೆ ಹೊಂದಿದ್ದಾರೆ.
ಡೆನಿಶಾ ಉತ್ತಮ ಬರಹಗಾರ್ತಿ ಹಾಗೂ ರೊಬೊಟಿಕ್ಸ್ ಮತ್ತು ಪಜಲ್ನಲ್ಲಿ ನಿಪುಣೆಯಾಗಿದ್ದಾಳೆ. ಡೆಸ್ಟಿನಿ ಗಣಿತ ಹಾಗೂ ನೃತ್ಯದಲ್ಲಿ ಜಾಣೆಯಾಗಿದ್ದಾಳೆ. ವಿದ್ಯಾರ್ಥಿಯಾಗಿದ್ದಾಗ ಏನಾದರೂ ಸಾಧಿಸಬೇಕು ಎಂಬ ಹಂಬಲ ಹೊಂದಿರುವವವರಿಗೆ ಈ ಸಹೋದರಿಯರು ಕೆಲ ಸಲಹೆಗಳನ್ನ ನೀಡಿದ್ದಾರೆ. ನೀವು ಏನನ್ನು ಸಾಧಿಸಬೇಕು ಎಂದು ಅಂದುಕೊಳ್ತಿರೋ ಅದನ್ನೆಲ್ಲ ಸಾಧಿಸಿ ಎಂದು ಡೆನಿಶಾ ಹಾಗೂ ಡೆಸ್ಟಿನಿ ಹೇಳಿದ್ದಾರೆ.