alex Certify ʼಕೊರೊನಾʼದಿಂದ ಉಸಿರಾಟದ ತೊಂದರೆ ಯಾರಲ್ಲಿ ಹೆಚ್ಚು……? ಡಾ. ರಾಜು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದ ಉಸಿರಾಟದ ತೊಂದರೆ ಯಾರಲ್ಲಿ ಹೆಚ್ಚು……? ಡಾ. ರಾಜು ಮಹತ್ವದ ಮಾಹಿತಿ

ಕೊರೊನಾ ಸೋಂಕಿತರು ಹೆಚ್ಚಾಗಿ ಉಸಿರಾಟದ ತೊಂದರೆಯಿಂದಲೇ ಬಳಲುತ್ತಿರುತ್ತಾರೆ. ಆದರೆ ಯಾರಲ್ಲಿ ಈ ಉಸಿರಾಟದ ತೊಂದರೆ ಹೆಚ್ಚು, ಅಂತವರು ಯಾವ ಕ್ರಮವನ್ನು ಅನುಸರಿಸಬೇಕು ಎಂಬ ಮಹತ್ವದ ಸಲಹೆಯೊಂದನ್ನು ಡಾ. ರಾಜು ಕೃಷ್ಣಮೂರ್ತಿ ತಮ್ಮ ಹೊಸ ವಿಡಿಯೋದಲ್ಲಿ ತಿಳಿಸಿದ್ದಾರೆ.

ಕೊರೊನಾ ಸೋಂಕು ಇರುವ ಗರ್ಭಿಣಿಯರಲ್ಲಿ ಹಾಗೂ ದಪ್ಪಕಾಯದವರಲ್ಲಿ ಉಸಿರಾಟದ ತೊಂದರೆ ಹೆಚ್ಚು. ಕಾರಣ ಗರ್ಭಿಣಿಯರಲ್ಲಿ ಹಾಗೂ ದಢೂತಿಕಾಯದವರಲ್ಲಿ ಹೊಟ್ಟೆ ಭಾಗ ದಪ್ಪವಿರುವುದರಿಂದ ಶ್ವಾಸಕೋಶದ ಮೇಲೆ ಒತ್ತಡ ಹೆಚ್ಚುತ್ತದೆ. ಇದರಿಂದಾಗಿ ಉಸಿರಾಟದಲ್ಲಿ ಏರುಪೇರಾಗುತ್ತದೆ.

ಹಾಗಾಗಿ ಇಂತವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಲ್ಲಿ ಕುಳಿತುಕೊಳ್ಳುವುದನ್ನು ಕಡಿಮೆ ಮಾಡಿ. ಬೆನ್ನಿಗೆ ಎರಡು ದಿಂಬುಗಳನ್ನಿರಿಸಿ 45 ಡಿಗ್ರಿ ಆಂಗಲ್ ನಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ. ಉಸಿರಾಟದ ತೊಂದರೆ ಕಂಡುಬಂದಲ್ಲಿ ಓಡಾಡುವುದು ಕೂಡ ಸೂಕ್ತವಲ್ಲ. ಓಡಾಡುವುದರಿಂದ ಸ್ಯಾಚುರೇಷನ್ ಲೆವಲ್ ಕಡಿಮೆಯಾಗಿ ಕುಸಿದು ಬೀಳುವ ಸಾಧ್ಯತೆ ಹೆಚ್ಚು. 15 ದಿನಗಳ ಸಂಪೂರ್ಣ ಬೆಡ್ ರೆಸ್ಟ್ ಮಾಡುವುದು ಒಳ್ಳೆಯದು ಎಂದು ಡಾ.ರಾಜು ಸಲಹೆ ನೀಡಿದ್ದಾರೆ.

ಕೊರೋನಾ ತಡೆಗೆ ಪರಿಣಾಮಕಾರಿ ಕಾರ್ಯ: ತೀರ್ಥಹಳ್ಳಿ ವೈದ್ಯ ಗಣೇಶ್ ಭಟ್ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್

ಹಾಗಾದರೆ ಉಸಿರಾಟದ ತೊಂದರೆಯಿಂದ ಪಾರಾಗಲು ಇನ್ನೂ ಏನೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಈ ಹೊಸ ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಡಾ.ರಾಜು ಅವರ ಈ ವಿಡಿಯೋವನ್ನು ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

https://www.youtube.com/watch?v=03E7WZJ01pM

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...