ವಾಷಿಂಗ್ಟನ್: ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಕೊರೋನಾ ಲಸಿಕೆ ನೀಡುತ್ತಿದ್ದು, ಲಸಿಕೆ ಪಡೆದುಕೊಂಡವರಿಗೆ ದಾಖಲೆ ಕಡ್ಡಾಯ ಮಾಡಲಾಗುತ್ತಿದೆ.
ಇ – ವ್ಯಾಕ್ಸಿನ್ ಪ್ರಮಾಣ ಪತ್ರ ಹೊಂದುವುದು ಕಡ್ಡಾಯವಾಗಿದೆ. 2 ಡೋಸ್ ಅಧಿಕೃತ ಕೊರೋನಾ ತಡೆ ಲಸಿಕೆ ಪಡೆದ ದಾಖಲೆಯನ್ನು ಕಡ್ಡಾಯವಾಗಿಸಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಬೇರೆ ದೇಶಗಳಿಗೆ ತೆರಳುವಾಗ ಪಾಸ್ಪೋರ್ಟ್ ಗಳ ರೀತಿಯಲ್ಲಿ ಇ -ವ್ಯಾಕ್ಸಿನ್ ಪ್ರಮಾಣ ಪತ್ರ ದಾಖಲೆ ಪಡೆದ ಕೂಡ ಅಗತ್ಯವಿರುತ್ತದೆ.
ಅಮೆರಿಕದ ಶ್ವೇತಭವನದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಆಂಟನಿ ಫೌಸಿ ಅವರು ಈ ಬಗ್ಗೆ ಮಾತನಾಡಿ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವಾಗ ಮುಂದಿನ ದಿನಗಳಲ್ಲಿ ಪಾಸ್ಪೋರ್ಟ್ ಜೊತೆಗೆ ಇ – ವ್ಯಾಕ್ಸಿನ್ ಪ್ರಮಾಣ ಪತ್ರ ಹೊಂದುವುದು ಕಡ್ಡಾಯವಾಗಬಹುದು. ಆದರೆ, ಅಮೆರಿಕದಲ್ಲಿ ಕಡ್ಡಾಯ ಮಾಡುವ ಚಿಂತನೆ ಇಲ್ಲ. ವಿಶ್ವದಲ್ಲಿ ಹೆಚ್ಚು ಜನ ಲಸಿಕೆ ಪಡೆಯಬೇಕಿದೆ ಎಂದು ತಿಳಿಸಿದ್ದಾರೆ.