ಕೇಶ ವಿನ್ಯಾಸ ಸರಿ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ, ಕೊಂಚ ಓರೆಕೋರೆಯಾದರೂ ಕಸಿವಿಸಿಗೊಳ್ಳುತ್ತಾರೆ.
ಇಲ್ಲೊಬ್ಬ ಹತ್ತು ವರ್ಷದ ಬಾಲಕ ತನ್ನ ತಲೆಕೂದಲ ಕಟಿಂಗ್ ಸರಿಯಾಗಿಲ್ಲವೆಂದು ಸಿಟ್ಟಿಗೆದ್ದು, ರಚ್ಚೆ ಹಿಡಿದು, ಅತ್ತೂ ಕರೆದು ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾನೆ.
ಗರ್ಭಿಣಿ ಎಂಬ ವಿಚಾರವನ್ನ ಮುಚ್ಚಿಟ್ಟ ಮಹಿಳೆ ಪೋಷಕರಿಗೆ ನೀಡಿದ್ದು ಭರ್ಜರಿ ಶಾಕ್….!
ಚೈನಾದ ಗುಯಿಹೌ ಪ್ರಾಂತ್ಯದ ಅನ್ಶುನ್ ಎಂಬಲ್ಲಿ ಈ ಘಟನೆ ನಡೆದಿದೆ. ಕೂದಲು ಸರಿಯಾಗಿ ಕಟ್ ಮಾಡಿಲ್ಲ ಎಂದು ಆ ಬಾಲಕ ಅಸಮಾಧಾನಗೊಂಡ ವಿಡಿಯೋ ವೈರಲ್ ಆಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದವರು ಏಕೆ ತಮ್ಮನ್ನು ಕರೆಯಲಾಯಿತು, ಯಾರು ಕರೆಸಿದ್ದು ಎಂದು ಕೇಳಿ ವಿಷಯ ತಿಳಿದ ಬಳಿಕ ದಿಗ್ಭ್ರಮೆಗೊಂಡರು.
ಕೊನೆಗೆ ಬಾಲಕನ ಸಹೋದರಿ ತಮ್ಮನಿಗೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದಳು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.