ಇ ಕಾಮರ್ಸ್ ನಲ್ಲಿ ಅನೇಕ ಬಾರಿ ಆರ್ಡರ್ ಮಾಡಿದ್ದೊಂದು ಮನೆಗೆ ತಲುಪಿದ್ದು ಎಂಬ ಉದಾಹರಣೆಗಳು ಸಾಕಷ್ಟು ಕಾಣಸಿಗುತ್ತವೆ. ಇಲ್ಲೊಂದು ಪ್ರಕರಣದಲ್ಲಿ ಅಚ್ಚರಿ ಎಂಬಂತೆ ಅಮೆಜಾನ್ ನಲ್ಲಿ ಆರ್ಡರ್ ಮಾಡಿದ್ದು ಮೌತ್ ವಾಶ್, ಆದರೆ ಬಂದಿದ್ದು ರೆಡ್ಮಿ ನೋಟ್- 10 ಮೊಬೈಲ್.
ಮುಂಬೈ ಮೂಲದ ಲೋಕೇಶ್ ದಾಗಾ ಎಂಬ ವ್ಯಕ್ತಿ ಅಮೆಜಾನ್ ನಿಂದ ತಮ್ಮ ಕೈಸೇರಿದ ವಸ್ತು ನೋಡಿ ದಂಗಾಗಿದ್ದಾರೆ.
ಕೋವಿಡ್ ಸೋಂಕಿತರಿಗಾಗಿ ಆಟೋದಲ್ಲೇ ಅಂಬುಲೆನ್ಸ್ ಸೇವೆ
ಅವರು ಕೋಲ್ಗೇಟ್ ಮೌತ್ವಾಶ್ ಅನ್ನು ಆರ್ಡರ್ ಮಾಡಿದ್ದರಂತೆ. ಕೆಲವು ದಿನಗಳ ನಂತರ ಅವರು ಪ್ಯಾಕೇಜ್ ಸ್ವೀಕರಿಸಿದ್ದು, ಅದನ್ನು ತೆಗೆದು ನೋಡಿದಾಗ ಸಂಪೂರ್ಣ ಆಶ್ಚರ್ಯಚಕಿತರಾದರು. ಮೌತ್ವಾಶ್ಗೆ ಬದಲಾಗಿ, ಅವರಿಗೆ ಹೊಸ ರೆಡ್ಮಿ ನೋಟ್ 10 ಫೋನ್ ಅವರ ಕೈಯಲ್ಲಿತ್ತು.
ವೆಬ್ ಸೈಟ್ ನಲ್ಲಿ ಮಾಡಿದ ಆರ್ಡರ್ ಸ್ಕ್ರೀನ್ ಶಾಟ್ ಮತ್ತು ಅವರು ಪಡೆದ ಮೊಬೈಲ್ ಫೋಟೋವನ್ನು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳ ಜೊತೆಗೆ, ಆರ್ಡರ್ ಐಡಿಯನ್ನೂ ಹಂಚಿಕೊಂಡಿದ್ದಾರೆ. ಈ ಫೋನ್ ಹೈದರಾಬಾದ್ನ ಮಹಿಳೆಯೊಬ್ಬರಿಗೆ ಸೇರಿದ್ದಾಗಿತ್ತು. ಬಳಿಕ ಅದಲು ಬದಲು ಮಾಡಲಾಯಿತಂತೆ.