ಮೀನುಗಾರರ ಬಲೆಗೆ ಬಿದ್ದ ಅಪರೂಪದ ದೈತ್ಯ ಮೀನುಗಳು 14-05-2021 4:16PM IST / No Comments / Posted In: Karnataka, Latest News ಕರಾವಳಿ ಜನರು ಮೀನು ಪ್ರಿಯರು ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಲಾಕ್ಡೌನ್ನಿಂದಾಗಿ ಮೀನು ಕೊಳ್ಳುವುದು ಕೊಂಚ ಕಷ್ಟವಾಗಿದೆ. ಇತ್ತ ಮೀನುಗಾರರಿಗೂ ಸಹ ಸೈಕ್ಲೋನ್ ಎಫೆಕ್ಟ್ ಹಾಗೂ ಲಾಕ್ಡೌನ್ ನಿರ್ಬಂಧಗಳಿಂದಾಗಿ ವ್ಯಾಪಾರ ಕೂಡ ಅಷ್ಟಕಷ್ಟೇ ಎಂಬಂತಾಗಿದೆ. ಈ ಎಲ್ಲದರ ನಡುವೆ ಉಡುಪಿಯಲ್ಲಿ ಗೋವಾ ಪರ್ಸಿನ್ ಬೋಟ್ ಮೀನುಗಾರರ ಬಲೆಗೆ 2 ಅಪರೂಪದ ಮೀನುಗಳು ಬಂದು ಬಿದ್ದಿವೆ. ಬೃಹತ್ ಗಾತ್ರದ ಮೀನುಗಳ ಜಾತಿಗೆ ಸೇರಿದ ಟೈಗರ್ ಹಾಗೂ ಕಿಡ ಎಂಬ ತೊರಕೆ ಜಾತಿಗೆ ಸೇರಿದ ಮೀನುಗಳು ಬಲೆಗೆ ಬಿದ್ದಿವೆ. ಈ ಮೀನುಪ್ರಿಯರಿಗೆ ತುಂಬಾನೆ ಇಷ್ಟವೆನಿಸುವ ಈ ದೈತ್ಯ ಮೀನುಗಳು ಭರ್ಜರಿ ದರಕ್ಕೆ ಸೇಲ್ ಆಗುವ ನಿರೀಕ್ಷೆ ಇದೆ. ದೈತ್ಯ ಮೀನುಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.