alex Certify ಬರೋಬ್ಬರಿ 70 ವರ್ಷಗಳಿಂದ ಕಬ್ಬಿಣದ ಶ್ವಾಸಕೋಶದಿಂದಲೇ ವ್ಯಕ್ತಿಯ ಉಸಿರಾಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 70 ವರ್ಷಗಳಿಂದ ಕಬ್ಬಿಣದ ಶ್ವಾಸಕೋಶದಿಂದಲೇ ವ್ಯಕ್ತಿಯ ಉಸಿರಾಟ…!

ಪಾಲ್​ ಅಲೆಕ್ಸಾಂಡರ್​​​ ಕಬ್ಬಿಣದ ಶ್ವಾಸಕೋಶ ಹೊಂದಿರುವ ವ್ಯಕ್ತಿ ಎಂದೇ ಪ್ರಪಂಚದಾದ್ಯಂತ ಫೇಮಸ್​ ಆಗಿದ್ದಾರೆ. 1952ರಿಂದ ಪಾಲ್​ ಕಬ್ಬಿಣದ ಶ್ವಾಸಕೋಶದ ಮೂಲಕವೇ ಉಸಿರಾಡುತ್ತಿದ್ದಾರೆ. ಕೇವಲ 6 ವರ್ಷ ವಯಸ್ಸಿನ ಬಾಲಕನಾಗಿದ್ದಾಗಿನಿಂದ ಪಾಲ್​ ಇದೇ ರೀತಿ ಕಬ್ಬಿಣದ ಶ್ವಾಸಕೋಶದ ಮೂಲಕವೇ ಉಸಿರಾಡುತ್ತಿದ್ದಾರೆ.

ಪಾಲ್​​ಗೆ ನಡೆಯಲು ಹಾಗೂ ಉಸಿರಾಡಲು ಆಗುತ್ತಿಲ್ಲ ಎಂದು ತಿಳಿದ ತಕ್ಷಣ ಪೋಷಕರು ಅವರನ್ನ ಆಸ್ಪತ್ರೆಗೆ ಹೊತ್ತೊಯ್ದರು. ಅಲ್ಲಿ ಪಾಲ್​ ನಿಧನರಾಗಿದ್ದಾರೆ ಎಂದು ಘೋಷಿಸಲಾಯ್ತು. ಸಾಕಷ್ಟು ವೈದ್ಯಕೀಯ ತಪಾಸಣೆ ಬಳಿಕ ಪಾಲ್​​ಗೆ ಕಬ್ಬಿಣದ ಶ್ವಾಸಕೋಶವನ್ನ ಅಳವಡಿಸಲಾಯ್ತು. ಪಾಲ್​ ಬರೋಬ್ಬರಿ 18 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿಯೇ ಕಾಲ ಕಳೆಯುವಂತಾಯ್ತು.

ಪಾಲ್​ ಜೀವನದ ವಿಚಾರವಾಗಿ ಚಿಕ್ಕ ಡಾಕ್ಯೂಮೆಂಟರಿ ಮಾಡಲಾಗಿದ್ದು ಇದರಲ್ಲಿ ಪಾಲ್​ ತಾವು ಹೇಗೆ ಕಬ್ಬಿಣದ ಶ್ವಾಸಕೋಶಕ್ಕೆ ಹೊಂದಿಕೊಂಡೆ ಎಂಬ ಕತೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟದ್ದಾರೆ.

ನಾನು ಎಲ್ಲರಂತೆಯೇ ಇರುತ್ತೇನೆ. ಬೆಳಗ್ಗೆ ಏಳುತ್ತೇನೆ, ಬ್ರಶ್​ ಮಾಡುತ್ತೇನೆ, ಮುಖ ತೊಳೆದುಕೊಳ್ತೇನೆ ಹಾಗೂ ತಿಂಡಿಯನ್ನ ಸೇವಿಸುತ್ತೇನೆ. ನನಗೆ ಸ್ವಲ್ಪ ಸಹಾಯದ ಅವಶ್ಯಕತೆ ಇರುತ್ತದೆ. ನಾನು ಓದುತ್ತೇನೆ ಹಾಗೂ ಪೇಂಟಿಂಗ್​ ಕೂಡ ಮಾಡುತ್ತೇನೆ. ನನಗೆ ಟಿವಿಯೊಂದನ್ನೇ ನೋಡ್ತಾ ಇರೋದು ಇಷ್ಟವಾಗೋದೇ ಇಲ್ಲ ಅಂತಾರೆ ಪಾಲ್​.

ಶಾಲಾ ಶಿಕ್ಷಣವನ್ನ ಪೂರ್ತಿಗೊಳಿಸಿದ ಬಳಿಕ ಪಾಲ್​ಗೆ ಕಾಲೇಜಿಗೆ ದಾಖಲಾತಿ ಅಷ್ಟು ಸುಲಭವಾಗಿ ದೊರೆಯಲಿಲ್ಲ. ಪಾಲ್​ ಒಬ್ಬ ದಿವ್ಯಾಂಗ ಹಾಗೂ ಪೊಲಿಯೋ ಲಸಿಕೆ ಪಡೆದಿಲ್ಲ ಎಂಬ ಕಾರಣಕ್ಕೆ ದಾಖಲಾತಿ ನೀಡಲು ನಿರಾಕರಿಸಲಾಗಿತ್ತು.

2 ವರ್ಷಗಳ ಕಾಯುವಿಕೆಯ ಬಳಿಕ ಕೆಲ ಷರತ್ತುಗಳನ್ನ ವಿಧಿಸಿ ಪಾಲ್​ಗೆ ದಾಖಲಾತಿ ನೀಡಲಾಯ್ತು. ಅದು ಏನೆಂದರೆ ಪಾಲ್​ ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಲಾಗಿತ್ತು. ಕೊನೆಗೂ ಪಾಲ್​ ಪರೀಕ್ಷೆಯಲ್ಲಿ ಉತ್ತೀರ್ಣರಾದ್ರು. ತಮ್ಮ ಬಾಯಿಯ ಸಹಾಯದಿಂದಲೇ ಪಾಲ್​ ತಮ್ಮ ಆತ್ಮ ಚರಿತ್ರೆ ‘ಇನ್​ಸ್ಪೈರಿಂಗ್​ ಪೀಪಲ್​’ ನ್ನು ಬರೆದಿದ್ದಾರೆ.

ಏನನ್ನಾದರೂ ಸಾಧಿಸಬೇಕು ಅನ್ನೋರಿಗೆ ನ್ಯೂನ್ಯತೆಗಳು ಒಂದು ಸವಾಲು ಎಂದು ಎನಿಸೋಕೆ ಸಾಧ್ಯವೇ ಇಲ್ಲ ಎಂದು ಪಾಲ್​ ಹೇಳಿದ್ದಾರೆ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...